Kolar heavy rain | ಭಾರಿ ಮಳೆಗೆ ಕುಸಿದ ಮನೆ – ಮಹಿಳೆಗೆ ಗಾಯ
ಕೋಲಾರ : ಚಿನ್ನದನಾಡು ಕೋಲಾರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮತ್ತೆ ಶುರುವಾಗಿದ್ದು, ನಾನಾ ಅವಾಂತರಗಳು ಸೃಷ್ಠಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ತಾತಿಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಭಾರಿ ಮಳೆಗೆ ದೇವರಾಜ್ ಎಂಬುವವರ ಹಳೆಯ ಮನೆ ಕುಸಿದಿದ್ದು, ಘಟನೆಯಲ್ಲಿ ಮಂಜುಳ ಎಂಬುವವರಿಗೆ ಗಂಭೀರವಾದ ಗಾಯಗಳಾಗಿವೆ.
ಮನೆ ಕುಸಿಯುತ್ತಿದ್ದಂತೆ ಸ್ಥಳೀಯರು ಕಾರ್ಯ ಪ್ರೌರುತ್ತರಾಗಿ ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಈ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








