ಖರ್ಗೆ ಅಧ್ಯಕ್ಷ ಸ್ಥಾನದ ಇಂಪ್ಯಾಕ್ಟ್ ಅಳೆಯಲು BJPಯಿಂದ ಅಧ್ಯಯನ…
ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಖರ್ಗೆ ಮುಳುಗುತ್ತಿರುವ ದೋಣಿಯ ಕ್ಯಾಪ್ಟನ್ ಎಂದು ಬಿಜೆಪಿ ರಾಜ್ಯ ಘಟಕ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದೆಯಾದರೂ ಸಮಾಜದ ವಿವಿಧ ವರ್ಗಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ.
ದಲಿತರಾದ ಖರ್ಗೆ ಅವರು ಪಕ್ಷದ ಉನ್ನತ ಹಂತವನ್ನು ತಲುಪಿರುವುದರಿಂದ ದಲಿತ ಮತಗಳು, ವಿಶೇಷವಾಗಿ ಪರಿಶಿಷ್ಟ ಜಾತಿಗಳು ಕ್ರೋಢೀಕರಿಸಲ್ಪಟ್ಟು ಕಾಂಗ್ರೆಸ್ ಪರವಾಗಿ ಹೋಗಬಹುದು ಎಂಬ ಆತಂಕ ಬಿಜೆಪಿ ಗೆ ಉಂಟಾಗಿದೆ.
ಕಲ್ಯಾಣ ಕರ್ನಾಟಕದ ಯಾವೊಬ್ಬ ನಾಯಕರೂ ಮತದಾರರ ಮೇಲೆ ಪ್ರಭಾವ ಬೀರುವಷ್ಟು ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ ಎಂಬುದು ಬಿಜೆಪಿ ವರಿಷ್ಠರ ಆತಂಕಕ್ಕೆ ಕಾರಣವಾಗಿರುವ ಇನ್ನೊಂದು ಅಂಶ.
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ (ಬೆಳಗಾವಿ ಪ್ರದೇಶ) ಲಿಂಗಾಯತರು ಮತ್ತು ವೀರಶೈವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ, ಕುರುಬರು ಮತ್ತು ದಲಿತರು ಸೇರಿದಂತೆ ಹಿಂದುಳಿದ ವರ್ಗಗಳೂ ಇಲ್ಲಿ ಆಳ್ವಿಕೆ ನಡೆಸುತ್ತವೆ.
ಕುರುಬರು ಸಿದ್ದರಾಮಯ್ಯನವರನ್ನು ಕಂಡಂತೆ, ಒಕ್ಕಲಿಗರು ಎಚ್.ಡಿ.ದೇವೇಗೌಡರನ್ನು, ವೀರಶೈವರು ಮತ್ತು ಲಿಂಗಾಯತರು ಬಿ.ಎಸ್.ಯಡಿಯೂರಪ್ಪ ಅವರನ್ನು ತಮ್ಮ ನಾಯಕರನ್ನಾಗಿ ಕಾಣುವಂತೆ ದಲಿತರು ಖರ್ಗೆ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತಾರೆ ಎಂಬುದು ನಿರ್ವಿವಾದದ ಸತ್ಯ.
ಅಲ್ಲದೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಲಿಂಗಾಯತರು ಮತ್ತು ವೀರಶೈವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲದಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ.
A study by BJP to measure the impact of Mallikarjun Kharge’s presidency…







