Mandya | ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್ ಗಳಿಬ್ಬರು ಸಾವು
ಮಂಡ್ಯ : ಫೋಟೋ ಸ್ಟುಡಿಯೋದಲ್ಲಿ ಕ್ಲೀನ್ ಮಾಡುತ್ತಿರುವ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್ ಗಳಿಬ್ಬರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.
ವಿವೇಕ್ ಮತ್ತು ಮಧುಸೂದನ್ ಮೃತ ದುರ್ದೈವಿಗಳಾಗಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ವಿವೇಕ್ ಮತ್ತು ಮಧುಸೂದನ್ ಅವರು ತಮ್ಮ ಲಕ್ಷ್ಮೀ ಸ್ಟುಡಿಯೋದಲ್ಲಿ ಕ್ಲೀನ್ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಸ್ಟುಡಿಯೋದಲ್ಲಿದ್ದ ವೈಯರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಇಬ್ಬರು ಫೋಟೋಗ್ರಾಫರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








