Strange Archak-ನಾವು ದಿನನಿತ್ಯ ದೇವರ ಪೂಜೆಮಾಡುವಾಗ ಹಲವಾರು ರೀತಿಯ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತೆವೆ . ಹಾಗೂ ದೇವರ ಪೂಜೆಮಾಡಲೇಂದು ಕೆಲವು ಪೂಜಾ ವಿಧಿ ವಿಧಾನಗಳು ಸಹ ಇರುತ್ತವೆ .ಅವುಗಳನ್ನು ಪಾಲಿಸ ಬೇಕಾಗುತ್ತದೆ.
ಪೂಜಾ ನೀತಿ-ನಿಯಮಗಳನ್ನು ಪಾಲಿಸುವುದುದನ್ನು ದೇವರು ಹಾಕಿದ ನಿಯಮವಲ್ಲದಿದ್ದರು . ದೇವರ ಭಕ್ತಿಗೆ ಭಕ್ತರು ಸಲ್ಲಿಸುವ ಗೌರವ ವಿಧಾನವಾಗಿದೆ. ಅದು ಭಕ್ತರ ಶಿಸ್ತು, ಶ್ರದ್ಧೆಯನ್ನು ತೋರುತ್ತದೆ ಆದರೆ ಇದನ್ನೆಲ್ಲ ಈ ಯಾಕೆ ಹೇಳುತ್ತಿದ್ದೆವೆ ಅಂತಾ ಯೋಚನೆ ಮಾಡ್ತಾ ಇದ್ದಿರಾ..?
ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವ ಮೂಲಕ ಅರ್ಚಕರೊಬ್ಬರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು..
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಅರ್ಚಕ ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಟ್ಟಿದ್ದ. ಈಗ ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ.
ಈ ಅರ್ಚಕರು ಮಾಡುವ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ವಿಡಿಯೋ ನೋಡಿದ ಅನೇಕರು ಅರ್ಚಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.








