ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Karnataka Rajyotsava – ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್ ಬಗ್ಗೆ ನಿಮಗೆಷ್ಟು ಗೊತ್ತು ?

Mahesh M Dhandu by Mahesh M Dhandu
October 25, 2022
in Newsbeat, State, ಕನ್ನಡ ರಾಜ್ಯೋತ್ಸವ
Karnataka Rajyotsava aluru venkata rao history

Karnataka Rajyotsava aluru venkata rao history

Share on FacebookShare on TwitterShare on WhatsappShare on Telegram

Karnataka Rajyotsava – ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್ ಬಗ್ಗೆ ನಿಮಗೆಷ್ಟು ಗೊತ್ತು ?

ಆಲೂರು ವೆಂಕಟರಾವ್..!! ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಪ್ರಖ್ಯಾತಿ ಪಡೆದರು. ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು.

Related posts

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

October 4, 2026
KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

October 4, 2026

ಆಲೂರು ವೆಂಕಟರಾಯರು ಜೀವನವನ್ನು ಸಂಪೂರ್ಣವಾಗಿ ಏಕೀಕರಣಕ್ಕಾಗಿಯೇ ಮುಡಿಪಾಗಿಟ್ಟವರು. ಕನ್ನಡಿಗರಲ್ಲಿ ಏಕೋಭಾವನೆ ಮೂಡಿಸುವುದಕ್ಕೆ ವಿದಾಯಕ ಕಾರ್ಯಕ್ರಮ ನಡೆಸಿದವರು. ಕರ್ನಾಟಕದ ಇತಿಹಾಸವನ್ನು ವಿಜಯನಗರದ ಸಾಮ್ರಾಜ್ಯದ ಮೂಲಕ ಪ್ರೇರಣೆ ಪಡೆದು ಕನ್ನಡಾಂಬೆಯು ಪ್ರತಿ ಕನ್ನಡಿಗನ ಅತ್ಮದಲ್ಲಿ ಸ್ಥಾಪನೆ ಆದಾಗ ಮಾತ್ರ ನವ ಕರ್ನಾಟಕದ ನಿರ್ಮಾಣ ಸಾಧ್ಯ ಎಂಬುದು ಆಲೂರು ಅವರ ವಿಚಾರವಾಗಿತ್ತು. ಕರ್ನಾಟಕ ವಿದ್ಯಾವರ್ಧಕ ಸಂಘ, ಕಸಾಪ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ಹುಟ್ಟು ಹಾಕಿದ ಕೀರ್ತಿ ವೆಂಕಟರಾಯರಿಗೆ ಸಲ್ಲಬೇಕು

ಮಾತನಾಡುವ ಭಾಷೆ ಬೇರೆ ಇದ್ದರೂ, ಗ್ರಾಂಥಿಕ ಭಾಷೆ ಒಂದೇ ಆಗಿರಬೇಕು. ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್‌ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ಆಲೂರು ವೆಂಕಟರಾಯರ ಮೇಲೆ ಟ್ಯಾಗೋರ್‌, ತಿಲಕರು, ಅರವಿಂದರ ಪ್ರಭಾವ ಹೆಚ್ಚಿನದು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸವನ್ನು ಮಾಡಿದ್ದಾರೆ. ಸಾಹಿತ್ಯ, ಸಂಶೋಧನೆ, ಇತಿಹಾಸ, ಪತ್ರಿಕೋದ್ಯಮ ಹೀಗೆ ವಿವಿಧ ಮಜಲುಗಳಲ್ಲಿ ಅವರು ಕೆಲಸ ಮಾಡಿದ್ದರು

ಕನ್ನಡಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಆಲೂರು ವೆಂಕಟರಾಯರು ಜನಸಿದ್ದು, ಜುಲೈ 12, 1880ರಂದು ಬಿಜಾಪುರದಲ್ಲಿ. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿ ಭಾಯಿ. ವೆಂಕಟರಾಯರು ತಮ್ಮ ಆರಂಭಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು.

ಬಳಿಕ 1903ರಲ್ಲಿ ಪುಣೆಯ ಫರ್ಗೂಸನ್ ಕಾಲೇಜಿಲನಲ್ಲಿ ಬಿ ಎ ಪದವಿ ಪಡೆದು ಮುಂಬೈನಲ್ಲಿ ಕಾನೂನಿನ ಅಭ್ಯಾಸ ಮಾಡಿ 1905ರಲ್ಲಿ ವಕೀಲರಾದರು. ಒಮ್ಮೆ ಇವರು ಹಂಪಿಗೆ ಭೇಟಿ ನೀಡಿದ್ದರು. ಅಲ್ಲಿನ ಅವಶೇಷಗಳು ಆಲೂರು ಅವರ ಮೇಲೆ ಅಪೂರ್ಣ ಪರಿಣಾಮ ಬೀರಿದ್ದವು. ಇದೇ ಅವರ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು ಎಂದು ಸ್ವತಃ ವೆಂಕಟರಾಯರೇ ಹೇಳಿಕೊಂಡಿದ್ದಾರೆ.

Karnataka Rajyotsava aluru venkata rao history
Karnataka Rajyotsava aluru venkata rao history

ಇದಾದ ಬಳೀಕ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದ ವೆಂಕಟರಾಯರು ವಾಗ್ಬೂಷಣ ಪತ್ರಿಕೆಯ ಸಂಪಾದಕರಾದರು. ಕರ್ನಾಟಕದ ವಿದ್ಯಾವರ್ಧಕರ ಸಂಘದ ಆಶ್ರಯದಲ್ಲಿ ಇವರು ನಡೆಸಿದ ಗ್ರಂಥಕರ್ತರ ಸಮಾವೇಶ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿದ ಆಲೂರರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ಟ್ರೀಯತ್ವ ಮೀಮಾಂಸೆ, ಗೀತಾ ರಹಸ್ಯ, ನಾವು ಈಗ ಬೇಡುವ ಸ್ವರಾಜ್ಯ, ಸ್ವರಾಜ್ಯವೆಂದರೇನು? ಸುಖವೂ ಶಾಂತಿಯೂ, ಸ್ವಾತಂತ್ರ್ಯ ಸಂಗ್ರಾಮ, ಗೀತಾಪ್ರಕಾಶ, ಗೀತಾ ಪರಿಮಳಾ ಸೇರಿದಂತೆ ಮುಂತಾದವುಗಳನ್ನು ಪ್ರಕಟಿಸಿದರು. 1922ರಲ್ಲಿ ಜಯಕರ್ನಾಟಕ ಪತ್ರಿಕೆಯನ್ನು ಸ್ಥಾಪಿಸಿದರು. ಅವರ ಸಂಪಾದಕೀಯ “ ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದಕೊಟ್ಟಿರುವೆ. ಕರ್ನಾಟಕದ ಸಕಲ ಭಾಗಗಳಲ್ಲಿಯೂ ಲೇಖಕರು ಕವಿಗಳು ಹುಟ್ಟಬೇಕೆಂಬುದೇ ನನ್ನ ಉದ್ದೇಶ.

ಈ ನಡುವೆ ಅವರು ಮಹಾತ್ಮ ಗಾಂಧಿಜೀ, ಬಾಲಗಂಗಾಧರ ತಿಲಕ, ವೀರ ಸಾವರ್ಕರ್ ಇಂತಹ ಮಹಾರಾಷ್ಟ್ರೀಯ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದರು. 1931ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ ಸರ್ಚ್ ವಾರೆಂಟ್ ಅನ್ನು ಹೊರಡಿಸಿತು. ಹಾಗೆ ಅವರನ್ನು ಸೆರೆ ಹಿಡಿದು ಕಲಘಟಗಿಯಲ್ಲಿ ದಿಗ್ಭಂದದಲ್ಲಿ ಇರಿಸಲಾಗಿತ್ತು. ವರ ಕವಿ ದ.ರಾ.ಬ್ರೇಂದ್ರೆ ಅವರು ಆಲೂರು ಅವರನ್ನು ಕರ್ನಾಟಕದ ಪ್ರಾಣೋಪಾಸಕರು ಎಂದು ಕರೆದಿದ್ದರು.

ಅಂತಿಮವಾಗಿ ಆಲೂರರು ಫೆಬ್ರವರಿ 25, 1964ರಲ್ಲಿ ನಿಧನರಾದರು. ನಾವು ಇಂದು ಕನ್ನಡದ ಅಮೃತಸುಧೆಯನ್ನು ಸವಿದಿದ್ದರೆ ಅದು ಆಲೂರು ವೆಂಕಟರಾಯರಂತಹ ಮಹನೀಯರಯ ನಮಗೆ ನೀಡಿದ ತೀರ್ಥಪ್ರಸಾದ.  

Tags: #Saaksha TValuru venkata raokarnataka rajyotsava
ShareTweetSendShare
Join us on:

Related Posts

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

by Shwetha
October 4, 2026
0

ಬೆಂಗಳೂರು: ನೈಸ್ ಯೋಜನೆ ಮತ್ತು ಭೂ ಅಕ್ರಮದ ವಿಚಾರವಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಸಮರ ಈಗ...

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

by Shwetha
October 4, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಅಕ್ರಮಗಳ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದೆ....

ಯುಪಿ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಾರೀ ಟಿಕೆಟ್ ಬದಲಾವಣೆ ಸಾಧ್ಯತೆ: 100 ಶಾಸಕರಿಗೆ ಕೊಕ್?

ಯುಪಿ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಾರೀ ಟಿಕೆಟ್ ಬದಲಾವಣೆ ಸಾಧ್ಯತೆ: 100 ಶಾಸಕರಿಗೆ ಕೊಕ್?

by Shwetha
October 4, 2026
0

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ತನ್ನ ಹಾಲಿ ಶಾಸಕರ ಕಾರ್ಯಕ್ಷಮತೆ ಮತ್ತು ಕ್ಷೇತ್ರಮಟ್ಟದ ಜನಬೆಂಬಲದ ಕುರಿತು ಆಂತರಿಕ ಮೌಲ್ಯಮಾಪನ ನಡೆಸುತ್ತಿದೆ. ಈ...

ತೆರಿಗೆದಾರರಿಗೆ ಬಿಗ್ ರಿಲೀಫ್ ಐಟಿಆರ್ ಮತ್ತು ಟ್ಯಾಕ್ಸ್ ಆಡಿಟ್ ಗಡುವು ವಿಸ್ತರಣೆ: ದಂಡದಿಂದ ಬಚಾವಾಗಲು ಅಕ್ಟೋಬರ್ 21 ಕ್ಕೆ ಮೊದಲೇ ಈ ಕೆಲಸ ಮುಗಿಸಿ

ತೆರಿಗೆದಾರರಿಗೆ ಬಿಗ್ ರಿಲೀಫ್ ಐಟಿಆರ್ ಮತ್ತು ಟ್ಯಾಕ್ಸ್ ಆಡಿಟ್ ಗಡುವು ವಿಸ್ತರಣೆ: ದಂಡದಿಂದ ಬಚಾವಾಗಲು ಅಕ್ಟೋಬರ್ 21 ಕ್ಕೆ ಮೊದಲೇ ಈ ಕೆಲಸ ಮುಗಿಸಿ

by Shwetha
October 4, 2026
0

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮತ್ತು ಆಡಿಟ್ ವ್ಯಾಪ್ತಿಗೆ ಬರುವ ಉದ್ಯಮಿಗಳಿಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ದೊಡ್ಡ ಮಟ್ಟದ ನಿರಾಳತೆ ನೀಡಿದೆ. 2026-27ರ ಅಸೆಸ್‌ಮೆಂಟ್...

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

by Shwetha
October 4, 2026
0

ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯಕ್ಕೆ ತುರ್ತಾಗಿ ಕೇಂದ್ರದ ನೆರವು ಬಿಡುಗಡೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram