Hardik Pandya – ಟೀಂ ಇಂಡಿಯಾದ ‘ಮುಂದಿನ ಕ್ಯಾಪ್ಟನ್ ಹಾರ್ದಿಕ್’
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಗೆಲುವಿನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು.
ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿದ್ದರು.
ಇದಲ್ಲದೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ವಿರಾಟ್ ಜೊತೆಗೆ ಶತಕದ ಜೊತೆಯಾಟವನ್ನಾಡಿದರು.
ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯವನ್ನು ಹಿರಿಯ ಕ್ರಿಕೆಟಿಗರು ಹಾಡಿ ಹೊಗಳುತ್ತಿದ್ದಾರೆ.
ಅದರಂತೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟರ್ ವಕಾರ್ ಯೂನಿಸ್ ಹಾರ್ದಿಕ್ ಪಾಂಡ್ಯವನ್ನು ಮುಂದಿನ ಕ್ಯಾಪ್ಟನ್ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಕೆಲವು ದಿನಗಳಿಂದ ಆತನ ಆಟವನ್ನು ಒಂದು ಬಾರಿ ಗಮನಿಸಿದ್ರೆ ಐಪಿಎಲ್ 2022 ಸಂದರ್ಭವಾಗಿ ಕ್ಯಾಪ್ಟನ್ ಆಗಿ ಟೈಟಲ್ ಗೆದ್ದರು.
ಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಸ್ಟ್ರಾಂಗ್ ಕಂ ಬ್ಯಾಕ್ ಮಾಡಿದರು. ಮುಖ್ಯವಾಗಿ ಫಿನಿಷರ್ ರೋಲ್ ಅನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ.
ಮೊದಲು ಅವರು ಐಪಿಎಲ್ ಕ್ಯಾಪ್ಟನ್ ಆಗಿದ್ದು, ಟ್ರೋಫಿ ಗೆದ್ದಿದ್ದಾರೆ.
ಈಗ ಟೀಂ ಇಂಡಿಯಾದಲ್ಲಿ ಪ್ರಮುಖ ಆಟಗಾರರಾಗಿ ಅಲ್ಲದೇ ಕ್ಯಾಪ್ಟನ್ ಗೆ ಸಲಹೆ ನೀಡುವ ಸ್ಥಾನದಲ್ಲಿದ್ದಾರೆ.
ತಂಡದ ಸೋಲು ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಭಾವ ಖಂಡಿತವಾಗಿ ಇರುತ್ತದೆ.
ಹಾರ್ದಿಕ್ ಮುಂದಿನ ಕ್ಯಾಪ್ಟನ್ ಆದ್ರೂ ಅಚ್ಚರಿಪಡಬೇಕಾಗಿಲ್ಲ ಎಂದು ವಕಾರ್ ಹೇಳಿದ್ದಾರೆ.







