Congress – ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು
ಬೆಂಗಳೂರು : ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿ ಕನಿಷ್ಠ ಪಕ್ಷ ಒಬ್ಬ ಯತ್ನಳರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು “ ನಿಮ್ಮ ಬಳಿ ಬಟ್ಟೆಯ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನನ್ನ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ನಾನು ಯಾರ ಬಳಿಯೂ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿ, ಕೋರ್ ಕಮಿಟಿ ಸದಸ್ಯರನ್ನಾಗಿ ಮಾಡಿ ಎಂದು ಹೋಗಿಲ್ಲ ಎಂದಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ರಾಜ್ಯ ಕಾಂಗ್ರೆಸ್ ಕುಟುಕಿದ್ದು, ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ #BJPvsBJP ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ! ಯತ್ನಳರ ಹಾವು ಯಾವುದು ಬಿಜೆಪಿ? ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ?
ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿ ಕನಿಷ್ಠ ಪಕ್ಷ ಒಬ್ಬ ಯತ್ನಳರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ! ಬಿ.ಎಸ್.ಯಡಿಯೂರಪ್ಪ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿ.ಎಲ್.ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್‌ರದ್ದು ಎಂದು ಕಾಂಗ್ರೆಸ್ ಬರೆದುಕೊಂಡಿದೆ.








