T20 World cup : ಆಫ್ರಿಕಾ ಬ್ಯಾಟರ್ ರಿಲೆ ರೋಸೋ ಶತಕಕ್ಕೆ ಥಂಡಾ ಹೊಡೆದ ಬಾಂಗ್ಲಾ ಬೌಲರ್ಸ್….
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಗುರುವಾರದ ಮೊದಲ ಪಂದ್ಯ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡಯುತ್ತಿದೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಆಫ್ರಿಕಾ ಆಟಗಾರ ರಿಲೆ ರೂಸೋ (109) ಅಬ್ಬರದ ಶತಕ ಮತ್ತು ಕ್ವಿಂಟನ್ ಡಿ ಕಾಕ್ (63) ಅರ್ಧಶತಕ ಭಾರಿಸುವ ಮೂಲಕ ಬಾಂಗ್ಲಾ ಬೌಲರ್ ಗಳನ್ನ ಬೆಂಡೆತ್ತಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನ ದಾಟಲು ಸಾಧ್ಯವಾಗಲಿಲ್ಲ.
ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಎರಡು ವಿಕೆಟ್ ಪಡೆದರು. ತಸ್ಕಿನ್ ಅಹ್ಮದ್, ಹಸನ್ ಮಹಮೂದ್ ಮತ್ತು ಅಫೀಫ್ ಹಸನ್ ತಲಾ ಒಂದು ವಿಕೆಟ್ ಪಡೆದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಮತ್ತು ರಿಲೆ ರುಸ್ಸೋ ನಡುವೆ 163 ರನ್‌ಗಳ ಬಲವಾದ ಜೊತೆಯಾಟ ಆಡಿದರು.
ಇದಕ್ಕೂ ಮೊದಲು ಬಾಂಗ್ಲಾದೇಶಕ್ಕೆ 5 ರನ್‌ಗಳ ದಂಡ ವಿಧಿಸಲಾಯಿತು, ಇದರ ಲಾಭವನ್ನು ಸಹ ದಕ್ಷಿಣ ಆಫ್ರಿಕಾ ಪಡೆದುಕೊಂಡಿದೆ. ಬೌಲರ್ ಬೌಲ್ ಮಾಡುವ ಮೊದಲು ಕೀಪರ್ ಚಲಿಸುವಂತಿಲ್ಲ ಕೀಪರ್ ಚಲಿಸಿದ್ದಕ್ಕಾಗಿ ಐದು ರನ್ ದಂಡ ವಿಧಿಸಲಾಗಿದೆ.
ಮೊದಲ ಪವರ್ ಪ್ಲೇ ನಲ್ಲಿ ದಕ್ಷಿಣ ಆಫ್ರಿಕ 6 ಓವರ್‌ಗಳಲ್ಲಿ 63 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ತಂಡ 2 ರನ್ ಗಳಿಸುವಷ್ಟರಲ್ಲಿ ನಾಯಕ ತೆಂಬಾ ಬವುಮಾ ವಿಕೆಟ್ ಕಳೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ವಿಕೆಟ್ ಕೀಪರ್ ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರಿಲೆ ರುಸ್ಸೋ ಇನ್ನಿಂಗ್ಸ್ ನಿಭಾಯಿಸಿದರು.
T20 World cup : he African Team Has The Upper Hand; There Were 7 Matches Between The Two Teams Bangladesh Lost All








