Minister Dr. K. Sudhakar – ನಮ್ಮಲ್ಲಿ ಓಮಿಕ್ರಾನ್ ಆತಂಕ ಇಲ್ಲ.. ಆದ್ರೆ..
ಮೈಸೂರು : ರಾಜ್ಯದಲ್ಲಿ ಸದ್ಯಕ್ಕೆ ಓಮಿಕ್ರಾನ್ ಆತಂಕವಿಲ್ಲ, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸುಧಾಕರ್, ಅಮೆರಿಕಾದಲ್ಲಿ ತೀವ್ರತರವಾದ ಕೇಸ್ ಗಳು ಕಂಡುಬಂದಿದೆ.
ಮಹಾರಾಷ್ಟ್ರದಲ್ಲಿ ಒಂದು ಕೇಸ್ ಪತ್ತೆಯಾಗಿದೆ.

ನಮಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ, ಆದ್ರೂ ಗಡಿ ಜಿಲ್ಲೆಗಳಿಗೆ ವಿಸ್ತೃತವಾದ ಮಾರ್ಗಸೂಚಿ ನೀಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಸದ್ಯ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಸಂದರ್ಭ ಬಂದಿಲ್ ಎಂದ ಸಚಿವರು, ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.








