Gandhadagudi – ರಾಜ್ಯಾದ್ಯಂತ ಅಪ್ಪು ಗಂಧದಗುಡಿ ದರ್ಶನ
ಬೆಂಗಳೂರು : ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಟನೆಯ ಗಂಧದಗುಡಿ ಚಿತ್ರ ಇಂದು ಆಫಿಷಿಯಲ್ ತೆರೆಕಂಡಿದೆ.
ಇದು ಪರಮಾತ್ಮನ ಕನಸಿನ ಕೂಸಾಗಿದ್ದು, ರಾಜ್ಯಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ.
ಇಂದು ಬೆಳಗ್ಗೆ ಆರು ಗಂಟೆಯಿಂದಲೇ ಥಿಯೇಟರ್ ಗಳಲ್ಲಿ ಗಂಧದಗುಡಿ ಪ್ರದರ್ಶನ ಕಾಣುತ್ತಿದೆ.

ರಾಜರತ್ನನನ್ನು ಕಣ್ತುಂಬಿಕೊಳ್ಳಲು ಜನರು ಥಿಯೇಟರ್ ಗಳತ್ತ ಮುಖ ಮಾಡುತ್ತಿದ್ದಾರೆ.
ಗಂಧದಗುಡಿ ಸಾಕ್ಷ್ಯಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಹೌಸ್ ಫುಲ್ ಆಗಿದೆ.
ಟೀ ಶರ್ಟ್, ಪುಲ್ ಓವರ್, ಶರ್ಟ್ ಮೇಲೆ ಅಪ್ಪು ಭಾವಚಿತ್ರಗಳು ರಾರಾಜಿಸುತ್ತಿವೆ.
ಥಿಯೇಟರ್ ಗಳ ಮುಂಭಾಗ ಕಟೌಟ್ ಗಳು ರಾರಾಜಿಸುತ್ತಿವೆ.








