Virat Kohli | ವಿರಾಟ ಪರ್ವ.. After a small gap Boss is back
ವಿರಾಟ್ ಕೊಹ್ಲಿ ವಿಶ್ವಕಪ್ ಕ್ರಿಕೆಟ್ ನ ಕಿಂಗ್.. ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಚುಟುಕು ಕ್ರಿಕೆಟ್ ನ ಹಬ್ಬ ನಡೆಯುತ್ತಿದೆ.
ಕಾಂಗರೂಗಳ ನಾಡಲ್ಲಿ ಮಳೆಯ ಅಡ್ಡಿಯಲ್ಲೂ ಟಿ 20 ವಿಶ್ವ ದಂಗಲ್ ಸಾಗುತ್ತಿದೆ.
ಘಟಾಘಟಿ ತಂಡಗಳಿಗೆ ಕ್ರಿಕೆಟ್ ಶಿಶುಗಳು ಶಾಕ್ ನೀಡುತ್ತಿವೆ. ಅಚ್ಚರಿ ರಿಸಲ್ಟ್ ಗಳು ಕೂಡ ಬರುತ್ತಿವೆ.
ಇದು ಎಲ್ಲಾ ಹೇಗೇ ಇದ್ದರೂ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಮಾತ್ರ ವಿರಾಟ್ ನಾಮಸ್ಮರಣೆ ಜೋರಾಗಿದೆ.
ಇದಕ್ಕೆ ಕಾರಣ.. ಟಿ 20 ವಿಶ್ವಕಪ್ ನಲ್ಲಿ ಕೊಹ್ಲಿ ವಿರಾಟ ರೂಪ..!!
ಹೌದು..! ಪಾಕಿಸ್ತಾನ ವಿರುದ್ಧದದ ಗೆಲುವಿನಲ್ಲಿ 82 ರನ್ ಮತ್ತು ನೆದರ್ ಲೆಂಡ್ ವಿರುದ್ದದ ಆಕರ್ಷಕ ಅರ್ಧಶತಕಗಳು ವಿರಾಟ್ ಕೊಹ್ಲಿಯ ಹಳೇ ದಿನಗಳನ್ನು ಮರಳಿ ತಂದುಕೊಟ್ಟಿವೆ.
ವಿಂಟೇಜ್ ವಿರಾಟ್ ಕೊಹ್ಲಿ ರೂಪವನ್ನ ಕ್ರಿಕೆಟ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ನಡೆದಿದ್ದೇ ಹಾದಿ ಎಂಬಂತೆ ಹಲವಾರು ದಾಖಲೆಗಳು ನಿರ್ಮಾಣವಾಗುತ್ತಿದೆ.
ಸದ್ಯ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯವರದ್ದೇ ದಾಖಲೆ.
111 ಇನ್ನಿಂಗ್ಸ್ ಗಳಿಂದ ವಿರಾಟ್ ಕೊಹ್ಲಿ 3856 ರನ್ ಗಳಿಸಿದ್ದಾರೆ.
ಇದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಚೇಸಿಂಗ್ ನಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿಯುವುದು ಸ್ವಲ್ಪ ಕಷ್ಟವೇ ಆಗಬಹುದು.
ಯಾಕೆಂದರೆ ಸದ್ಯ ಟಿ 20 ಯಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ 1983 ರನ್ ಗಳಿಸಿದ್ದಾರೆ. ಇದಲ್ಲದೆ ಎರಡನೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು 50 ರನ್ ಬಾರಿಸಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.
ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್ ಮಾಡಿ ಗೆದ್ದ ತಂಡದಲ್ಲಿ ಹೆಚ್ಚು ಅರ್ಧಶತಕ ಗಳಿಸಿದ ಕೀರ್ತಿಯೂ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ.
ಇನ್ನು ಟಿ 20 ಕ್ರಿಕೆಟ್ ನ ಇತಿಹಾಸದಲ್ಲಿ ಮೂರನೇ ಕ್ರಮಾಂಕದಲ್ಲಿ ಒಂದು ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ.
ಈ ಸದರಿಯಲ್ಲಿ ವಿರಾಟ್ 2036 ರನ್ ಗಳಿಸಿದ್ದಾರೆ. ಹಾಗೇ ಮೂರನೇ ಕ್ರಮಾಂಕದಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಹಾಗೆಯೇ ನಂಬರ್ ಮೂರಲ್ಲಿ ವಿರಾಟ್ ಕೊಹ್ಲಿ 30 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಅದೇ ರೀತಿ ಟಿ 20 ವಿಶ್ವಕಪ್ ನ ಪಂದ್ಯವೊಂದರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ 80 ಪ್ಲಸ್ ರನ್ ಬಾರಿಸಿದ ಭಾರತದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಜೊತೆಗೆ ಟಿ 20 ವಿಶ್ವಕಪ್ ನಲ್ಲಿ 10ಕ್ಕೂ ಹೆಚ್ಚು ಅರ್ಧಶತಕ ಬಾರಿಸಿದ ಜಗತ್ತಿನ ಏಕೈಕ ಬ್ಯಾಟ್ಸ್ ಮೆನ್.
ಹೀಗೆ ವಿರಾಟ್ ಕೊಹ್ಲಿ ಸಾಲು ಸಾಲು ದಾಖಲೆಗಳನ್ನು ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ.
After a gap Boss is back ಎಂಬಂತೆ ಸಣ್ಣ ವಿರಾಮದ ಬಳಿಕ ಫಾರ್ಮ್ ಗೆ ಬಂದಿರುವ ವಿರಾಟ್ ಕೊಹ್ಲಿ ಮೊದಲಿಗಿಂತಲೂ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುತ್ತಿರುವುದು ಖುಷಿಯ ಸಂಗತಿಯಾಗಿದೆ.








