T20 World Cup : ಮಳೆಯಿಂದಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ರದ್ದು….
ಮಳೆಯಿಂದಾಗಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ವಿಶ್ವಕಪ್ ಪಂದ್ಯ ರದ್ದಾಗಿದೆ. ವರುಣ ಅವಕೃಪೆಯಿಂದ ಇಲ್ಲಿಯವರೆಗೆ ವಿಶ್ವಕಪ್ ನ ನಾಲ್ಕು ಪಂದ್ಯಗಳು ರದ್ದಾಗಿದ್ದು, ಪ್ರೇಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯಬೇಕಿತ್ತು, ಆದರೆ ಮಳೆಯಿಂದಾಗಿ ಟಾಸ್ ಮಾಡಲು ಸಾಧ್ಯವಾಗಲಿಲ್ಲ.
ಟಿ 20 ವಿಶ್ವಕಪ್ ನಲ್ಲಿ ಆಡುವ ಎಲ್ಲಾ ಪಂದ್ಯಗಳು ಪ್ರಮುಖವಾದರೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಎರಡೂ ತಂಡಗಳಿಗೆ ಇಂಪಾರ್ಟೆಂಟ್ ಆಗಿತ್ತು. ಗೆದ್ದ ತಂಡಗಳಿಗೆ ಸೆಮಿಸ್ ಆದಿ ಸುಗಮವಾಗುತ್ತಿತ್ತು. ಆದರೆ ಒಂದೇ ಒಂದು ಬಾಲ್ ಆಡಿಸದೇ ಪಂದ್ಯ ರದ್ದಾಗಿದೆ.
ಇದೀಗ ಮಳೆಯಿಂದಾಗಿ ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕಕ್ಕೆ ತೃಪ್ತಿಪಡಬೇಕಾಗಿದೆ. ಆದರೂ ಪಂದ್ಯ ರದ್ದಾದದ್ದರಿಂದ ಇಂಗ್ಲೆಂಡ್ ಗೆ ಹೆಚ್ಚು ಪ್ರಯೋಜನವಾಗಿದ್ದು, ಉತ್ತಮ ರನ್ ರೇಟ್ ಮೂಲಕ ಅಂಕಪಟ್ಟಿಯಲ್ಲಿ ಮುಂದಿದೆ.
T20 World Cup : Match between England and Australia canceled due to rain….








