ಬೆಂಗಳೂರು : ಕೊರೊನಾ ಹೆಮ್ಮಾರಿ ಹೊಡೆತಕ್ಕೆ ಕರ್ನಾಟಕ ತತ್ತರಿಸಿ ಹೋಗಿದ್ದು,ಲಾಕ್ ಡೌನ್ ಸ್ಟ್ರೋಕ್ ಗೆ ಈಗಾಗಲೇ ಹಲವರು ಕೆಲಸ ಕಳೆದುಕೊಂಡು ಅಲೆದಾಡ್ತಿದ್ದಾರೆ. ಇದರ ಮಧ್ಯೆ ಇದೀಗ ಲಾಕ್ ಡೌನ್ ಸಡಿಲಿಕೆಯ ನಂತರ ಬೆಂಗಳೂರಿನಲ್ಲಿ ಮನೆ, ಪಿಜಿ ಮಾಲೀಕರು ಘರ್ಜಿಸುತ್ತಿದ್ದಾರೆ. ಬಾಡಿಗೆ ಮನೆ, ಪಿಜಿ ಗಳಲ್ಲಿದ್ದ ಬ್ಯಾಚುಲರ್ಸ್ ಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ.
ಹೌದು..! ಮಹಾಮಾರಿ ಕೊರೊನಾ ಆರ್ಭಟಕ್ಕೆ ಜನರ ಬದುಕು ಬೀದಿಗೆ ಬಂದಿದೆ. ಇದು ಒಂದು ಕಡೆಯಾದ್ರೆ ಬೆಂಗಳೂರಿನ ಬಾಡಿಗೆ ಮನೆ, ಪಿಜಿಗಳಲ್ಲಿ ನೆಲೆಸಿದ್ದ ಯುವಕ-ಯುವತಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಮಾಲೀಕರ ಕಿರುಕುಳಕ್ಕೆ ನಡುಗುತ್ತಿದ್ದಾರೆ. ಲಾಕ್ ಡೌನ್ ಟೈಮಲ್ಲಿ ಬಾಡಿಗೆ ಕಟ್ಟಲು ಆಗದೇ ಅದೆಷ್ಟೋ ಜನ ಒದ್ದಾಡ್ತಿದ್ದಾರೆ. ಇತ್ತ ಮಾಲೀಕರು ಕೂಡ ರಾಕ್ಷಸರಂತೆ ಮಾನವೀಯತೆ ಮರೆತು ಹಣಕ್ಕಾಗಿ ಪೀಡಿಸುತ್ತಿದ್ದಾರೆ.
ಮತ್ತೊಂದೆಡೆ ಲಾಕ್ ಡೌನ್ ಟೈಂ ನಲ್ಲಿ ಊರಿಗೆ ಹೋಗಿ ಈಗ ಮತ್ತೆ ಬೆಂಗಳೂರಿಗೆ ಬರುವಷ್ಟರಲ್ಲಿ ಹಲವರು ತಮ್ಮ ಕೆಲಸವನ್ನು ಕಳೆದುಕೊಂಡರೆ, ಕೆಲವರು ವರ್ಕ್ ಫ್ರಂ ಹೋಮ್ ನಲ್ಲಿದ್ದಾರೆ. ಎರಡು ತಿಂಗಳ ಹಣ ಪೇ ಮಾಡೋಕೆ ಆಗಲ್ಲ. ನಮ್ಮ ಕೈಲಾದಷ್ಟು ಪೇ ಮಾಡ್ತೇವೆ ಎಂದು ಮನವಿ ಮಾಡಿಕೊಂಡು ಮಾಲೀಕರಿಗೆ ಕನಿಕರ ಬರುತ್ತಿಲ್ಲ. ಬದಲಿಗೆ ತಾವು ಲಾಸ್ ಆಗಿರೋದನ್ನೇ ವಾದಿಸಿ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ.
ಇತ್ತ ಲಾಕ್ ಡೌನ್ ನಿಂದಾಗಿ ಈಗಾಗಲೇ ಹಲವರು ಕೆಲಸ ಕಳೆದುಕೊಂಡು ಅಲೆದಾಡ್ತಿದ್ದಾರೆ. ಸ್ವಂತ ಊರು ಬಿಟ್ಟು ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾ ಮಧ್ಯೆಯೇ ಕಂಪನಿಯಿಂದ ಕಂಪನಿಗಳಿಗೆ ಕೆಲಸಕ್ಕಾಗಿ ಅಲೆದಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಇದ್ಯಾವ ಕನಿಕರವಿಲ್ಲದೇ ಪಿಜಿ, ಮನೆ ಮಾಲೀಕರು ಹಣದಾಹಿಗಳಾಗಿ ವರ್ತಿಸುತ್ತಿರೋದು ಬ್ಯಾಚುಲರ್ಸ್ ಗಳ ಆಕ್ರೋಶಕ್ಕೆ ಕಾರಣವಾಗಿದೆ.








