Samantha : ಸಂಭಾವನೇ ಹೆಚ್ಚಿಸಿಕೊಂಡ ಸ್ಯಾಮ್ – ನಟರಿಗಿಂತ ಕಡಿಮೆಯಿಲ್ಲ…
ನಟ ನಾಗಚೈತನ್ಯ ಜೊತೆಗಿನ ವಿಚ್ಛೇಧನದ ಬಳಿಕ ಸಮಂತಾ ಸಕ್ರಿಯವಾಗಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ತೆಲುಗು ಬಾಲಿವುಡ್ ಜೊತೆಗೆ ವೆಬ್ ಸೀರೀಸ್ ಗಳಲ್ಲೂ ಬ್ಯೂಸಿಯಾಗಿದ್ದಾರೆ.
ಪುಷ್ಪ ಸಿನಿಮಾದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ನಂತರ ಸಮಂತಾ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಆಗಿನಿಂದ ಸಂಭಾವನೆ ಹೆಚ್ಚಿಸಿಕೊಂಡು ಬರುತ್ತಿರುವ ನಟಿ ಸಂಮಂತಾ , ಇದೀಗ ಮತ್ತೊಮ್ಮೆ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಸದ್ಯ ಸಮಂತಾ ನಟನೆಯ ಬಹುನಿರೀಕ್ಷೆಯ ಯಶೋಧ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಸಿನಿಮಾ ಬರುತ್ತಿದ್ದು ಟ್ರೇಲರ್ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಇದ್ರಲ್ಲಿ ಸಮಂತಾ ಬಾಡಿಗೆ ತಾಯಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೊಂದು ಸಸ್ಪೆನ್ಸ್ , ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ..
ಮುಂದೆ ಶಾಕುಂತಲಂ ಮತ್ತು ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿರುವ ಖುಷಿ ಸೇರಿ ಸಾಕಷ್ಟು ಸಿನಿಮಾಗಳು ಸಮಂತಾ ಬಳಿ ಇವೆ.. ಶಾಕುಂತಲಂ ಸಹ ರಿಲೀಸ್ ಹಂತದಲ್ಲಿದೆ.. ಇದೆಲ್ಲದರ ನಡುವೆ ಸಮಂತಾ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.. ಇದು ಸ್ಟಾರ್ ಹೀರೋಗಳಷ್ಟೇ ಇದೆ ಎನ್ನಲಾಗ್ತಿದೆ..
ಸಮಂತಾ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಚರ್ಚೆ ಭಾರಿ ಸದ್ಧು ಮಾಡುತ್ತಿದೆ. ಸದ್ಯ ಸಮಂತಾ ಮಯೋಸೈಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಚಿಕಿತ್ಸೆ ಪಡೆಯುತ್ತಿದ್ದಾರೆ.
samantha demanding 8 crore rupees remuneration for a movie