NIA ಮತ್ತೆ ದಾಳಿ – ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಮೂವರು ಅರೆಸ್ಟ್…
ರಾಜ್ಯದ ಹಲವೆಡೆ NIA ದಾಳಿ ಮತ್ತೆ ಮುಂದುವರೆದಿದೆ. ದಕ್ಷಿಣ ಕನ್ನಡದಲ್ಲಿ ಬೆಳ್ಳಂ ಬೆಳಗ್ಗೆ NIA ಕಾರ್ಯಾಚರಣೆಗೆ ಇಳಿದಿದ್ದು, ಪ್ರವೀಣ್ ನೆಟ್ಟಾರ್ ಹತ್ಯೆ ಸಂಬಂಧ ಮತ್ತೆ ಮೂವರು ಅರೆಸ್ಟ್ ಮಾಡಿದ್ದಾರೆ.
ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಸುಳ್ಯ, ಮೈಸೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿ PFI ಮುಖಂಡರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಬಿಜೆಪಿ ಮುಖಂಡ ಪ್ರವೀಣ್ ಬೆಳ್ಳಾರೆಯಲ್ಲಿ ಹತ್ಯೆಯಾಗಿದ್ದು, ಪ್ರವೀಣ್ ಹತ್ಯೆ ಸಂಬಂಧ NIA ಹಲವರನ್ನ ಅರೆಸ್ಟ್ ಮಾಡಿದೆ. ಬೆಳ್ಳಾರೆ ಗ್ರಾ.ಪಂ.ಸದಸ್ಯ ಇಕ್ಬಾಲ್, ಸುಳ್ಯದ ಇಬ್ರಾಹಿಂ ಶಾ, , SDPI ಕಾರ್ಯದರ್ಶಿ ಶಫಿ ಬೆಳ್ಳಾರೆಯನ್ನು ಬಂಧಿಸಿದ್ಧಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುತ್ತಮುತ್ತ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಶೋಧ ಕಾರ್ಯ ನಡೆಸುತ್ತಿದೆ.
NIA raids again – Three arrested in connection with Praveen Nettaru’s murder…
ಇದನ್ನೂ ಓದಿ – https://saakshatv.com/now-is-the-time-…olitics-165986-2/








