Madhubangarappa | ಆಜಾನ್ ಕೇಳಿ ಯಾರು ಹಾರ್ಟ್ ಅಟ್ಯಾಕ್ ಆಗಿ ಸತ್ತಿಲ್ಲ
ಮಂಗಳೂರು : ಆಜಾನ್ ಕೇಳಿದ ತಕ್ಷಣ ಇಲ್ಲಿ ಯಾರು ಹಾರ್ಟ್ ಅಟ್ಯಾಕ್ ಆಗಿ ಸತ್ತಿಲ್ಲ. ವಿಷಯದಲ್ಲಿ ಮುಸ್ಲಿಮರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಬಂಗಾರಪ್ಪ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದ್ವೇಷ ಮನಸ್ಥಿತಿಯ ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ ಸುಲಿಗೆ ಮಾಡಿಸುತ್ತಿದೆ.

ಮಂಗಳೂರಲ್ಲಿ ನಾವು ಬಿಜೆಪಿಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಸವಾಲು ಹಾಕಿದರು.
ಬಿಜೆಪಿ ಜಾತಿ ಧರ್ಮಕ್ಕೆ ದ್ರೋಹ ಮಾಡಿ 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದೆ.
ಮಂಗಳೂರಿನಲ್ಲಿ ಬಿಜೆಪಿ – ಸಂಘಪರಿವಾರ ಹಾಗೂ ವಿಹೆಚ್ ಪಿಯವರೇ ಸಮಾಜಕ್ಕೆ ಬೆಂಕಿ ಹಚ್ಚುತ್ತಿದ್ದಾರೆ.
ಹಿಂದೂಗಳಿಗೆ ಬಿಜೆಪಿಯ ಮೇಲೆ ಸಿಟ್ಟಿದೆ. ಬಿಜೆಪಿಯವರು ವ್ಯವಹಾರ ಮಾಡಲು ಬಂದಿದ್ದಾರೆ, ನಿಮ್ಮ ಉದ್ಧಾರ ಮಾಡಲಿಕ್ಕೆ ಅಲ್ಲ ಎಂದಿದ್ದಾರೆ.








