Ravichandran Ashwin | ಜಿಂಬಾಬ್ವೆ ತಂಡ ಬಲಿಷ್ಠವಾಗಿದೆ
ಯಾವುದೇ ತಂಡವನ್ನು ಕೇವಲವಾಗಿ ಪರಿಗಣಿಸುವುದಿಲ್ಲ, ಎಷ್ಟು ಸಾಧ್ಯವೋ ಅಷ್ಟು ಆಕ್ರಮಣಕಾರಿಯಾಗಿ ಇರಬೇಕು.
ಎದುರಾಳಿ ತಂಡದ ಮೇಲೆ ಯಾವುದೇ ಕನಿಕರ ತೋರಿಸುವ ಅವಶ್ಯಕತೆ ಇಲ್ಲ. ಪ್ರಸ್ತುತ ಪೈಪೋಟಿ ನಡೆಯುತ್ತಿದೆ.
ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಆರಂಭದಿಂದಲೇ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಬೇಕು ಎಂದು ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸದ್ಯ ಸೆಮೀಸ್ ಗೆ ಹತ್ತಿರವಾಗಿದ್ದು ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿದ್ರೆ ಸೆಮೀಸ್ ಸ್ಥಾನ ಪಕ್ಕಾ ಆಗಲಿದೆ.
ಹೀಗಾಗಿ ಇಂದು ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, ಟಿ 20 ವಿಶ್ವಕಪ್ ನಲ್ಲಿ ಪ್ರತಿ ಮ್ಯಾಚ್ ನಂತೆ ಈ ಪಂದ್ಯವನ್ನು ಗೆಲ್ಲಲೇಬೇಕು.
ಜಿಂಬಾಬ್ವೆ ತಂಡ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ತಂಡವನ್ನು ಸುಲಭವಾಗಿ ಸೋಲಿಸಬಲ್ಲೆವು ಅಂತಾ ನಾವು ಅಂದುಕೊಳ್ಳುತ್ತಿಲ್ಲ ಎಂದಿದ್ದಾರೆ ರವಿಚಂದ್ರನ್ ಅಶ್ವಿನ್.








