viral video: ಕಳ್ಳತನದ ವರದಿ ಮಾಡುತಿದ್ಧ ಪತ್ರಕರ್ತನ ಇಯರ್ ಪೋನ್ ಕದ್ದ ಗಿಳಿ…
ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಿ ಗಿಳಿಯೊಂದು ಪತ್ರಕರ್ತರ ಏರ್‌ಫೋನ್ ಅನ್ನ ಕದ್ದುಕೊಂಡು ಹಾರಿ ಹೋಗಿದೆ. ತಮಾಷೆಯ ವಿಷಯವೆಂದೆರೆ ನಗರದಲ್ಲಿ ನಡೆದ ಕಳ್ಳತನ ಘಟನೆಗಳ ಬಗ್ಗೆ ವರದಿ ಮಾಡುತ್ತಿದ್ದಾಗಲೇ ಗಿಳಿ ಆತನ ಇಯರ್ ಪೋನ್ ಕದ್ದುಕೊಂಡು ಹೋಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
— Televisivamente (@Televisivamente) November 3, 2022
ಪತ್ರಕರ್ತ ನಿಕೋಲಸ್ ಕ್ರುಮ್ ಅವರ ಈ ವೀಡಿಯೊವನ್ನು ಜೀನ್ ಹಾಲ್ಹೆಡ್ ಎಂಬ ಮಹಿಳೆ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಗರದಲ್ಲಿ ನಡೆದ ಕಳ್ಳತನದ ಬಗ್ಗೆ ನಿಕೋಲ್ಸ್ ಲೈವ್ ವರದಿ ಮಾಡುತ್ತಿದ್ದುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಅವನ ಭುಜದ ಮೇಲೆ ಗಿಳಿಯೊಂದು ಕೂರುತ್ತದೆ. 10 ಸೆಕೆಂಡುಗಳ ಕಾಲ ಕುಳಿತ ನಂತರ, ಗಿಳಿ ತನ್ನ ಇಯರ್‌ಫೋನ್‌ನೊಂದಿಗೆ ಹಾರಿಹೋಗುತ್ತದೆ. ಆನಂತರ ಗಿಳಿ ಇಯರ್‌ಫೋನ್‌ಗಳನ್ನ ದೂರದಲ್ಲಿ ಬೀಳಿಸಿದೆ ಎಂದು ವರದಿಗಳು ಹೇಳಿವೆ.
A parrot interrupts a live from a Chilean journalist and takes off with his headphone.








