Vande Bharat Express : ಚೆನೈ – ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರಯಲ್ ರನ್ ಶುರು….
ದಕ್ಷಿಣ ಭಾರತದ ಮೊದಲ ವಂದೇ ಎಕ್ಸಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾರಂಭವಾಗಲಿದ್ದು, ಇಂದಿನಿಂದ ಟ್ರಯಲ್ ರನ್ ಪ್ರಾರಂಭಿಸಿದೆ. ರೈಲು ಬೆಳಗ್ಗೆ 5.50 ಕ್ಕೆ ಚೆನ್ನೈ ಸ್ಟೇಷನ್ನಿಂದ ಹೊರಟಿದೆ. ಬೆಂಗಳೂರಿನಲ್ಲಿ ಮಾತ್ರ ಇಂದು ಸ್ಟಾಪ್ ಕೊಡಲಿದೆ.
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣಕ್ಕೆ 10.25ಕ್ಕೆ ವಂದೇ ಭಾರತ್ ಬರಲಿದೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಐದು ನಿಮಿಷಗಳ ಕಾಲ ನಿಲುಗಡೆಯಾಗಿ, ಮಧ್ಯಾಹ್ನ 12.30ಕ್ಕೆ ಮೈಸೂರು ನಿಲ್ದಾಣ ರೈಲು ತಲುಪಲಿದೆ.
ಈ ರೈಲು ಬುಧವಾರ ಹೊರತು ಪಡಿಸಿ ವಾರದ 6 ದಿನಗಳಲ್ಲಿ ಸಂಚರಿಸಲಿದೆ. ಒಟ್ಟು 16 ಕೋಚ್ ಗಳು ರೈಲಿಗೆ ಜೋಡಿಸಿದ್ದು, ಫ್ರೀ ವೈಫೈ ಸೌಲಭ್ಯ ಮತ್ತು ಸ್ವಂ ಚಾಲಿತ ಡೋರ್ ವ್ಯವಸ್ಥೆ ಇರಲಿದೆ.
ಪ್ರಧಾನಿ ಮೋದಿ ನವೆಂಬರ್ 11ರಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡುತ್ತಾರೆ. ದೇಶದ 5ನೇ, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ವಂದೇ ಭಾರತ್ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತದೆ.
Vande Bharat Express : Chennai – Mysore Vande Bharat Express trial run started….








