Adipurush : ಆದಿಪುರುಷ ಬಿಡುಗಡೆ ದಿನಾಂಕ ಮುಂದೂಡಿಕೆ – ಜೂನ್ 2023 ಕ್ಕೆ ರಿಲೀಸ್
ನಟ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೋಗಿದೆ. ಜನವರಿ 2023 ಸಂಕ್ರಾಂತಿಯಂದು ಬಿಡುಗಡೆಯಾಗಬೇಕಿದ್ದ ಚಿತ್ರ ಜೂನ್ 2023 ರಲ್ಲಿ ಬಿಡುಗಡೆಯಾಗಲಿದೆ.
ಕೆಲವು ವಾರಗಳ ಹಿಂದೆಯಷ್ಟೆ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿ ಟೀಕೆಗೆ ಗುರಿಯಾಗಿತ್ತು. ವಿಎಫ್‌ಎಕ್ಸ್‌ನ ಕಳಪೆ ಗುಣಮಟ್ಟದ ಕಾರಣಕ್ಕೆ ಟ್ರೋಲ್ ಮಾಡಲಾಗಿತ್ತು.
ಇದೀಗ ಚಿತ್ರದ ನಿರ್ದೇಶಕ ಓಂ ರಾವುತ್ ಟ್ವೀಟ್ ಮಾಡಿ “ಆದಿಪುರುಷ ಒಂದು ಚಲನಚಿತ್ರವಲ್ಲ, ಪ್ರಭು ಶ್ರೀರಾಮನ ಮೇಲಿನ ನಮ್ಮ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವವನ್ನು ನೀಡಲು, ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಆದಿಪುರುಷ ಈಗ ಜೂನ್ 16, 2023 ರಂದು ಬಿಡುಗಡೆಯಾಗಲಿದೆ. ಭಾರತವು ಹೆಮ್ಮೆಪಡುವಂತಹ ಚಲನಚಿತ್ರವನ್ನು ಮಾಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ, ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.
ಪ್ರಭಾಸ್ ಚಿತ್ರ ಮುಂದಕ್ಕೆ ಹೋಗಿದ್ದರಿಂದ ಸಂಕ್ರಾಂತಿಯಂದು ತೆರೆಕಾಣಲಿರುವ ತಮಿಳು ತೆಲುಗು ಚಿತ್ರಗಳಿಗೆ ಅಡ್ಡಿ ಆತಂಕಗಳು ದೂರಾಗಲಿದೆ. Adipurush release date pushed to June 2023