11,000 ಸಾವಿರ ಉದ್ಯೋಗಿಗಳನ್ನ ವಜಾಗೊಳಸಿದ ಫೇಸ್ ಬುಕ್ ( ಮೆಟಾ)…
ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿ ಮೆಟಾ ಪ್ಲಾಟ್ ಫಾರ್ಮ್ಸ್ ತನ್ನ ಕಂಪನಿಯ 11,000 ಉದ್ಯೋಗಿಗಳನ್ನ ವಜಾಗೊಳಿಸಿದೆ.
ಫೇಸ್ ಬುಕ್ (ಮೆಟಾ) 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಸ್ವತಃ ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಈ ಹಿಂದೆ ಘೋಷಿಸಿದ್ದರು.ತಪ್ಪು ನಿರ್ಧಾರಗಳು ಮತ್ತು ಆದಾಯ ಕುಸಿತ ಇದಕ್ಕೆ ಕಾರಣ ಎಂದು ಜುಕರ್ ಬರ್ಗ್ ಹೇಳಿದ್ದಾರೆ.
ಜುಕರ್‌ಬರ್ಗ್ ಬ್ಲಾಗ್ ಮೂಲಕ, ‘ಇಂದು ನಾನು ಮೆಟಾ ಇತಿಹಾಸದಲ್ಲಿ ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳ ಬಗ್ಗೆ ಹೇಳಲಿದ್ದೇನೆ. ನಮ್ಮ ತಂಡದ ಗಾತ್ರವನ್ನು ಸುಮಾರು 13% ರಷ್ಟು ಕಡಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಇದರಿಂದ 11 ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾ ಉದ್ಯೋಗಿಗಳೊಂದಿಗೆ ಹಂಚಿಕೊಂಡ ಸಂದೇಶದಲ್ಲಿ ಸಂತ್ರಸ್ತ ಉದ್ಯೋಗಿಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರಗಳಿಗೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ವಜಾಗೊಂಡವರಿಗೆ 4 ತಿಂಗಳ ವೇತನ
ಮಂಗಳವಾರವಷ್ಟೇ ನೌಕರರನ್ನು ವಜಾ ಮಾಡುವ ಬಗ್ಗೆ ಜುಕರ್‌ಬರ್ಗ್ ಮಾಹಿತಿ ನೀಡಿದ್ದರು. ವಜಾಗೊಂಡ ಉದ್ಯೋಗಿಗಳಿಗೆ ನಾಲ್ಕು ತಿಂಗಳ ವೇತನವನ್ನು ನೀಡಲಾಗುವುದು ಎಂದು ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥ ಲೋರಿ ಗೋಲಾರ್ ಗುಂಪಿಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 2022 ರ ಅಂತ್ಯದ ವೇಳೆಗೆ ಮೆಟಾ 87,314 ಉದ್ಯೋಗಿಗಳನ್ನು ಹೊಂದಿದೆ. ಮೆಟಾ ಪ್ರಸ್ತುತ WhatsApp, Instagram ಮತ್ತು Facebook ಸೇರಿದಂತೆ ವಿಶ್ವದ ಕೆಲವು ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.
Mark Zuckerberg Jobs | Meta (Facebook) Employee Layoff Latest Information








