India Vs England : ವಿಶ್ವಕಪ್ ನಲ್ಲಿ 3 ಭಾರಿ ಮುಖಾಮುಖಿ – ಭಾರತಕ್ಕೆ ವಿಕೆಟ್ ಕೀಪರ್ ದೆ ಚಿಂತೆ…
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 ವಿಶ್ವಕಪ್ ನ ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ಭಾರತ ಇಂದು ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ. ಗ್ರೂಪ್ ಹಂತದಲ್ಲಿ ಭಾರತ ಐದು ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದಿದ್ದರೆ ಇಂಗ್ಲೆಂಡ್ ಮೂರು ಪಂದ್ಯಗಳನ್ನ ಗೆದ್ದು ನಾಕೌಟ್ ಹಂತವನ್ನ ತಲುಪಿದೆ.
ಅಡಿಲೇಡ್ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.
ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಇಂಗ್ಲೆಂಡ್ ಬಲ…
ಭಾರತಕ್ಕೆ ಸವಾಲಾಗಲಿರುವ ಪ್ರಮುಖ ಅಂಶವೆಂದರೆ ಅದು ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್. 9 ನೇ ಕ್ರಮಾಂಕದ ವರೆಗೆ ಬ್ಯಾಟ್ಸ್ ಮನ್ ಗಳನ್ನ ಹೊಂದಿರುವು ಇಂಗ್ಲೆಂಡ್ ಪ್ಲಸ್ ಪಾಯಿಂಟ್ ಅದಲ್ಲದೆ ಇಂಗ್ಲೆಂಡ್ ಕೂಡ ಮಾರ್ಕ್ ವುಡ್ ಅವರಂತಹ ಅದ್ಭುತ ವೇಗಿಗಳನ್ನು ಹೊಂದಿದೆ. ಇದುವರೆಗೆ 4 ಪಂದ್ಯಗಳನ್ನು ಆಡಿರುವ ಅವರು 9 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 154.74 ವೇಗದಲ್ಲಿ ಬೌಲ್ ಮಾಡಿದರು. ಯುವ ಎಡಗೈ ವೇಗಿ ಸ್ಯಾಮ್ ಕುರ್ರಾನ್ ಕೂಡ ಫಾರ್ಮ್ನಲ್ಲಿದ್ದಾರೆ. 4 ಪಂದ್ಯಗಳಲ್ಲಿ 10 ವಿಕೆಟ್ ಉರುಳಿಸಿದ್ದಾರೆ.
ಫಾರ್ಮ್ನಲ್ಲಿರುವ ಟೀಂ ಇಂಡಿಯಾ
ಭಾರತದ ಬಗ್ಗೆ ಹೇಳುವುದಾದರೆ, ತಂಡವು ಉತ್ತಮ ಫಾರ್ಮ್ನಲ್ಲಿ ಸಾಗುತ್ತಿದೆ. ಸೂಪರ್ 12 ರಲ್ಲಿ ಅವರು 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯದಲ್ಲಿ ಸೋತಿದೆ. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಹೊರತುಪಡಿಸಿ, ಕೆಎಲ್ ರಾಹುಲ್ ಮತ್ತೆ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದರು.
ಸೂರ್ಯಕುಮಾರ್ ಮತ್ತು ಕೊಹ್ಲಿ ಈ ಬಾರಿಯ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ದೊಡ್ಡ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸೂರ್ಯ ಅವರ ಮೂರು ಅರ್ಧಶತಕಗಳು ಮತ್ತು 360-ಡಿಗ್ರಿ ಹೊಡೆತಗಳು ಕೇವಲ ಚರ್ಚೆಯ ವಿಷಯವಾಗಿರಲಿಲ್ಲ, ಆದರೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಈ ಬಾರಿಯ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ವೇಗದ ಬೌಲಿಂಗ್ ಅದ್ಭುತವಾಗಿದೆ. ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ಜೊತೆಗೆ ಭುವನೇಶ್ವರ್ ಕುಮಾರ್ ಕೂಡ ಪಂದ್ಯಾವಳಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಭುವಿ 5 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ವಿರುದ್ಧ ಕೊಹ್ಲಿಯ ಪ್ರದರ್ಶನ ಅತ್ಯುತ್ತಮವಾಗಿದೆ.
ವಿಕೆಟ್ ಕೀಪಿಂಗ್ ನದ್ದೇ ಚಿಂತೆ…
ಭಾರತಕ್ಕೆ ಸದ್ಯ ಕಾಡುತ್ತಿರುವ ದೊಡ್ಡ ಚಿಂತೆಯಂದರೆ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ಯಾರು ಎನ್ನುವುದು. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ನಾಯಕ ರೋಹಿತ್ ಶರ್ಮ ಪಂಥ್ ಮತ್ತು ಕಾರ್ತಿಕ್ ನಡುವೆ ಯಾರು ಪ್ಲೇಯಿಂಗ್ ಇಲೆವೆನ್ ಅಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವುದನ್ನ ಇನ್ನೂ ಗೌಪ್ಯವಾಗಿಟ್ಟಿದ್ದಾರೆ.
ನ್ಯೂಜಿಲೆಂಡ್ ತಂಡವನ್ನ ಸೋಲಿಸಿ ಪಾಕಿಸ್ತಾನ ತಂಡ ಈಗಾಗಲೇ ಫೈನಲ್ ತಲುಪಿರುವುದರಿಂದ ಟೀಂ ಇಂಡಿಯ ಸಹ ಫೈನಲ್ ತಲುಪಬೇಕು ಎಂದು ಅಭಿಮಾನಿಗಳು ಬಯಸುತ್ತಯಿದ್ದಾರೆ.
India V / S England semi-final – Both the teams will meet for the third time in the World Cup…








