Rohit Sharma | ರೋಹಿತ್ ಮೇಲೆ ಫ್ಯಾನ್ಸ್ ಫೈರ್.. ಧೋನಿ ಮೇಲೆ ಪ್ಯಾರ್
ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ 140 ಕೋಟಿ ಭಾರತೀಯರ ಕನಸು ನುಚ್ಚುನೂರಾಗಿದೆ.
ಟಿ 20 ವಿಶ್ವಕಪ್ 2022ರ ಎರಡನೇ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದೆ.
ಇದನ್ನ ಭಾರತೀಯರು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇಂಗ್ಲೆಂಡ್ ಗೆ ಕನಿಷ್ಟ ಪೈಪೋಟಿ ನೀಡದೇ ಭಾರತ ಕ್ರಿಕೆಟ್ ತಂಡ ಸೋಲು ಒಪ್ಪಿಕೊಂಡಿದೆ.
ಹೀಗಾಗಿ ಟೀಂ ಇಂಡಿಯಾದ ಫ್ಯಾನ್ಸ್ ತೀವ್ರ ಅಸಮಾಧಾನಗೊಂಡಿದ್ದಾರೆ.
ಮುಖ್ಯವಾಗಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಗಳನ್ನು ಹಾಕುತ್ತಾ ಟ್ರೋಲ್ ಮಾಡುತ್ತಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಮಾತ್ರ ತಂಡವನ್ನು ಗೆಲ್ಲಿಸುತ್ತಾರೆ ಎನ್ನುತ್ತಿದ್ದಾರೆ.
ಅದೇ ರೀತಿ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿ ಅವರನ್ನು ಟ್ರೆಂಡ್ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅವರನ್ನ ಅಭಿಮಾನಿಗಳು ಹಾಡಿಹೋಗಲುತ್ತಿದ್ದಾರೆ.








