ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ನಡುವಿನ ತಮಾಷೆಯ ಜಗಳ…!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಸುಮಾರು ವರ್ಷಗಳಿಂದ ಗೆಳೆಯರು. 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಜೊತೆಯಾಗಿ ಆಡಿದವರು. ನಂತರ ಟೀಮ್ ಇಂಡಿಯಾದಲ್ಲೂ ಜೊತೆಯಾಗಿ ಆಡುತ್ತಿದ್ದಾರೆ. ಹೀಗಾಗಿ ಒಬ್ಬರೊನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮೈದಾನದಲ್ಲಿ ರಕ್ಕಸನಂತೆ ಬ್ಯಾಟ್ ಬೀಸುತ್ತಿದ್ರೆ, ರವೀಂದ್ರ ಜಡೇಜಾ ಸ್ಪಿನ್ ಮೋಡಿಯ ಜೊತೆಗೆ ಚಿರತೆಯ ವೇಗದಲ್ಲಿ ಫೀಲ್ಡಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆಕ್ರಮಣಕಾರಿ ಪ್ರವೃತ್ತಿಯಲ್ಲಿ ವಿರಾಟ್‍ಗಿಂತ ಜಡೇಜಾ ಕಮ್ಮಿ ಏನು ಇಲ್ಲ.
ಇದೀಗ ದೋಸ್ತಿಗಳು ಸಾಮಾಜಿಕ ಜಾಲ ತಾಣದಲ್ಲಿ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಅದು ಕೂಡ ತಮಾಷೆಗಾಗಿ ಅಷ್ಟೇ. ವಿರಾಟ್ ಕೊಹ್ಲಿ ಸಾಮಾಜಿಕ ಜಾಲ ತಾಣದಲ್ಲಿ ಯಾವಾಗಲೂ ಬಿಝಿಯಾಗಿರುತ್ತಾರೆ. ಈಗಂತೂ ಕ್ರಿಕೆಟ್ ಟೂರ್ನಿಗಳು ಇಲ್ಲ. ಆದ್ರಿಂದ ತನ್ನ ಸಾಮಾಜಿಕ ಜಾಲ ತಾಣದ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಸಂತಸವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ರವೀಂದ್ರ ಜಡೇಜಾ ಕೂಡ.
ಈ ಬಾರಿ ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದು ರವೀಂದ್ರ ಜಡೇಜಾ. ರವೀಂದ್ರ ಜಡೇಜಾ ತನ್ನ ಇನ್‍ಸ್ಟಾಗ್ರಾಂನಲ್ಲಿ, ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಡಿಆರ್‍ಎಸ್ ಮನವಿ ಸಲ್ಲಿಸುತ್ತಿರುವ ಫೋಟೋವೊಂದನು ಶೇರ್ ಮಾಡಿದ್ದಾರೆ, ಅಲ್ಲದೆ, ನಾನು ನಿನ್ನ ಬಳಿ ಡಿಆರ್‍ಎಸ್ ಮನವಿ ಮಾಡು ಅಂತ ಹೇಳಿಲ್ಲ ಅನ್ನೋ ಟ್ಯಾಗ್ ಲೈನ್ ಹಾಕಿದ್ದಾರೆ.
ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ವಿರಾಟ್ ಕೊಹ್ಲಿ ತಮಾಷೆಯಾಗಿಯೇ ರವೀಂದ್ರ ಜಡೇಜಾಗೆ ತಿರುಗೇಟು ನೀಡಿದ್ದಾರೆ. ನೀನು ಯಾವಾಗಲೂ ಔಟ್ ಅನ್ನೋ ತೀರ್ಮಾನಕ್ಕೆ ಬಂದಿರುತ್ತಿಯಾ. ಆದ್ರೆ ನಿನಗೆ ಡಿಆರ್‍ಎಸ್ ಮನವಿ ಸಲ್ಲಿಸಿದ್ದ ನಂತರ ಸಂಶಯಗಳು ಬರುತ್ತವೆ ಎಂದು ಟೀಮ್ ಇಂಡಿಯಾ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಡಿಆರ್‍ಎಸ್ ಮನವಿಯಲ್ಲಿ ಟೀಮ್ ಇಂಡಿಯಾ ಕಳೆದ
ಎರಡು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ಯಶ ಸಾಧಿಸಿಲ್ಲ. ಸುಮಾರು 9 ಬಾರಿ ಡಿಆರ್‍ಎಸ್ ಮನವಿ ತಪ್ಪಾಗಿದೆ. ಒಟ್ಟಿನಲ್ಲಿ ದೋಸ್ತಿಗಳ ಡಿಆರ್‍ಎಸ್ ಮನವಿಯ ತಮಾಷೆಯ ಜಗಳಕ್ಕೆ ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.








