Hit And Run-ರಾಜಧಾನಿ ಬೆಂಗಳೂರಿನಲ್ಲಿ ಇತ್ತಿಚಿಗೆ ಅಪಘಾತಗಳು ಹೆಚ್ಚಾಗುತ್ತಿದ್ದು ಎಲ್ಲರಿಗೂ ತಿಳಿದೆ ಇದೆ .
ಈಗ ಇದೆ ರೀತಿಯ ಕಲ್ಯಾಣ ನಗರದಲ್ಲಿ ನಿನ್ನೆ ರಾತ್ರಿ 11ರ ಸುಮಾರಿಗೆ ಹಿಟ್ ಆ್ಯಂಡ್ ರನ್ ಅಪಘಾತ ನಡೆದಿದೆ. ಈ ಬೀಕರ ಅಪಘಾತದಲ್ಲಿ ಬಾಪಿ ಕುಮಾರ್ ಎಂಬ 23 ವರ್ಷದ ಯುವಕ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ .
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕ್ಯಾಂಟರ್ ಒಂದು ಯುವಕನ ಮೇಲೆ ಹರಿದು ಯುವಕ ಸಾವನಪ್ಪಿದ ಭೀಕರ ದೃಷ್ಯ ಪೋನ್ ನಲ್ಲಿ ಸೆರೆಯಾಗಿದ್ದು ಇದಿಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ .
https://twitter.com/AnshumanGaurav2/status/1591142464785879040?ref_src=twsrc%5Etfw%7Ctwcamp%5Etweetembed%7Ctwterm%5E1591142464785879040%7Ctwgr%5E53ef26ac334902fc7a8a723b999553217ce7cea7%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fbengaluru%2Ftwenty-three-years-youth-killed-in-hit-and-run-accident-in-bengaluru-ayb-au7-469101.html
ಅಪಘಾತದ ವಿಡಿಯೋ ವಿಕ್ಷೀಸಿದವರು ಸ್ಥಳೀಯರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಘಟನೆಯು ಬಾನಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅಪಘಾತದಲ್ಲಿ ಮೃತವಾದ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಪಿ ಕುಮಾರ್ ಎಂದು ಗುರುತಿಸಲಾಗಿದ್ದು .
ನಿನ್ನೆ ರಾತ್ರಿ 11 ಗಂಟೆಗೆ ಹೆಬ್ಬಾಳ ರಿಂಗ್ ರಸ್ತೆಯನ್ನು ದಾಟುತ್ತಿದ್ದ ವೇಳೆ ಹೆಬ್ಬಾಳದ ಕಡೆಯಿಂದ ಕೆ.ಆರ್. ಪುರಂ ಕಡೆಗೆ ಬರುತ್ತಿದ್ದ ಕ್ಯಾಂಟರ್ ರಸ್ತೆ ದಾಟುತ್ತಿದ್ದ ಪಾದಚಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ವೇಳೆ ರಸ್ತೆಯ ಮೇಲೆ ತಕ್ಷಣ ಬಿದ್ದ ವ್ಯಕ್ತಿಗೆ ಬೆನ್ನಿನ ಹಿಂಭಾಗ, ಸೊಂಟ ಮತ್ತು ಹೊಟ್ಟೆಗೆ ಭಾಗಕ್ಕೆ ಬಲವಾದ ಗಾಯವಾಗಿದೆ. ಅಪಘಾತ ಮಾಡಿದ ವಾಹನ ಚಾಲಕ ವಾಹನ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದು ಸಾರ್ವಜನಿಕರ ಸಹಾಯದಿಂದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗಿತ್ತು .
ದುರಾದೃಷ್ಟ ವಶಾತ ಚಿಕಿತ್ಸೆ ಫಲಿಸದೆ ಬಾಪಿ ನಿನ್ನೆ ರಾತ್ರಿ 11.50 ಕ್ಕೆ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಮಾಡಿದ ವಾಹನವನ್ನು ಪತ್ತೆಮಾಡಲು ಪೊಲೀಸರು ಮುಂದಾಗಿದ್ದು ಅಪಘಾತದ ವೇಳೆ ಕ್ಯಾಂಟರ್ ಹಿಂದೆ ಬರುತ್ತಿದ್ದ ಕಾರಿನ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.








