Rain yellow alert-ಹವಾಮಾನ ಇಲಾಖೆಯಿಂದ ಅಲರ್ಟ್!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ
ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ.
ವಿವಿಧ ಜಿಲ್ಲೆಗಳಲ್ಲಿ ನ,13, 14 ರಂದು ಮಳೆ
ರಾಜ್ಯದಲ್ಲಿ ಚಳಿಯ ಜೋತೆಗೆ ಮಳೆ ಅಬ್ಬರ ಶುರುವಾಗಿದೆ ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ.
ಹಿಂಗಾರು ಮಳೆ ಚುರುಕುಗೊಂಡಿರುವ ಲಕ್ಷಣಗಳು ಗೋಚಿರಿಸಿತ್ತಿದ್ದು. ಬೆಂಗಳೂರಿನ ಜೊತೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಲಕ್ಷಣವನ್ನು ಹವಾಮಾನ ಇಲಾಖೆ ನೀಡಿದೆ .
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ದಿಂದಾಗಿ ನಮ್ಮ ರಾಜ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ .
ಎರಡು- ಮೂರು ದಿನ ಬೆಂಗಳೂರಿನಲ್ಲಿ ಮಳೆ ಆಗಲಿದ್ದು ಕರಾವಳಿ ಸೇರಿದಂತೆ ಒಳನಾಡಿನಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿಗೆ ಇದೇ 13, 14, 15ರಂದು ಮಳೆಯಾಗು ಮುನ್ಸುಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಮಳೆ ದಕ್ಷಿಣ ಒಳನಾಡಿಗೆ ಹೆಚ್ಚಾಗಲಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಾಮರಾಜನಗರ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಜಿಲ್ಲೆಗಳಿಗೆ ಮಿಂಚು, ಗುಡುಗು ಸಹಿತ ಮಳೆ ಯಾಗಲಿದ್ದು ಎಲ್ಲೋ ಅಲರ್ಟ್ ಘೊಶಿಸಿದೆ.








