Pro kabaddi 9 : ತಲೈವಾಸ್ – ಪೈರೇಟ್ಸ್ ನಡುವೆ ರಣರೋಚಕ ಹಣಾಹಣಿ – ಟೈನಲ್ಲಿ ಮ್ಯಾಚ್ ಅಂತ್ಯ
ನವೆಂಬರ್ 16 ರಂದು ನಡೆದ ರಣ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ಸಮಬಲ ಪ್ರದರ್ಶಿಸಿದ್ದು , ಟೈನಲ್ಲಿ ಅಂತ್ಯಗೊಂಡಿದೆ..
ಪುಣೆಯ ಶಿವಛತ್ರಪತಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ಹಾಗೂ ತಮಿಳು ತಲೈವಾಸ್ ತಂಡಗಳು 33-33 ಅಂಕಗಳಿಂದ ಸಮಬಲ ಸಾಧಿಸಿ ಟೈ ಮಾಡಿಕೊಂಡಿವೆ.. ಪಂದ್ಯದ ಕೊನೆಯವರೆಗೂ ರೋಚಕತೆಯಿಂದ ಪಂದ್ಯ ಕೂಡಿತ್ತು..
ಮೊದಲಾರ್ಧದಲ್ಲಿ ಪಾಟ್ನಾ 20-14 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.
ತಲೈವಾಸ್ ಪರ ರೈಡರ್ ನರೇಂದರ್ 16 ಅಂಕ ಪಡೆದರು. ರೈಡರ್ ಅಜಿಂಕ್ಯ ಪವಾರ್ 7 ಅಂಕ ಸಂಪಾದಿಸಿದರು. ಡಿಫೆಂಡರ್ ಸಾಹಿಲ್ ಗುಳಿಯಾ 4 ಅಂಕ ಸಂಪಾದಿಸಿದರು.
ಪಾಟ್ನಾ ಪರ ರೈಡರ್ ಸಚಿನ್ 14, ಆಲ್ರೌಂಡರ್ ರೋಹಿತ್ ಗುಳಿಯಾ 9 ಅಂಕ, ಆಲ್ರೌಂಡರ್ ಚಿಯಾನೆಹ 4 ಅಂಕ ಸಂಪಾದಿಸಿದರು. ರೈಡರ್ ಮೋನು 2 ಅಂಕ ಸಂಪಾದಿಸಿದರು.








