LPG Gas : ಸಿಲಿಂಡರ್‌ಗೆ ಶೀಘ್ರದಲ್ಲೇ ಕ್ಯೂಆರ್ ಕೋಡ್ !!
LPG ಸಿಲಿಂಡರ್‌ಗೆ ಶೀಘ್ರದಲ್ಲೇ ಕ್ಯೂಆರ್ ಕೋಡ್ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಲ್‌ಪಿಜಿ ಕಳ್ಳತನವನ್ನು ತಡೆಯುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್‌ಗಳನ್ನು ಸಿಲಿಂಡರ್‌ಗಳಿಗೆ ಅಳವಡಿಸಲು ಮುಂದಾಗಿರುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕ್ಯೂಆರ್ ಕೋಡ್ ಅನ್ನು ಸ್ಕಾನ್ ಮಾಡಿದ್ರೆ ಗ್ರಾಹಕರಿಗೆ LPG ಸಿಲಿಂಡರ್ ಬಗೆಗಿನ ಮಾಹಿತಿ, ರಿಫಿಲ್ ಆದ ಸ್ಥಳ, ಏಜೆನ್ಸಿ, ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಸಿಗಲಿದೆ. ಕೋಡ್-ಆಧಾರಿತ ಟ್ರ್ಯಾಕಿಂಗ್ ಮತ್ತು ಟ್ರೇಸ್ ಉಪಕ್ರಮವು ಸಿಲಿಂಡರ್ ಕಳ್ಳತನವನ್ನು ತಡೆಯಲು ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಕ್ಯೂಆರ್ ಕೋಡ್ ಅನ್ನು ಅಸ್ತಿತ್ವದಲ್ಲಿರುವ ಸಿಲಿಂಡರ್‌ಗಳಲ್ಲಿ ಅಂಟಿಸಲಾಗುವುದು ಮತ್ತು ಹೊಸ ಸಿಲಿಂಡರ್‌ಗಳಿಗೆ ವೆಲ್ಡಿಂಗ್ ಮಾಡಲಾಗುವುದು. ಕ್ಯೂಆರ್ ಕೋಡ್‌ನಿಂದ ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್, ದಾಸ್ತಾನು ನಿರ್ವಹಣೆ ಹೀಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿದೆ ಎಂದು ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದಲ್ಲಿ ಸಚಿವರು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದು, ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ.








