ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಬೆಲೆ ಕಡಿಮೆಯಾಯ್ತಾ? ಚಿಂತೆ ಬೇಡ, ಹೆಚ್ಚುವರಿ ಹಣ ವಾಪಸ್ ಕೊಡುತ್ತೆ ‘ಮೇಕ್‌ಮೈಟ್ರಿಪ್’!

admin by admin
October 4, 2026
in Newsbeat, National, ದೇಶ - ವಿದೇಶ
makemytrip-price-drop-protection-flight-ticket-refund

makemytrip-price-drop-protection-flight-ticket-refund

Share on FacebookShare on TwitterShare on WhatsappShare on Telegram

ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವುದು ಯಾವಾಗಲೂ ಒಂದು ದೊಡ್ಡ ಗೊಂದಲದ ಕೆಲಸ. ʼಈಗಲೇ ಬುಕ್ ಮಾಡಬೇಕಾ? ಅಥವಾ ನಾಳೆ ಟಿಕೆಟ್ ದರ ಇನ್ನಷ್ಟು ಕಡಿಮೆಯಾಗುತ್ತಾ?ʼ ಎಂಬ ಆತಂಕ ಎಲ್ಲರಿಗೂ ಇದ್ದೇ ಇರುತ್ತದೆ. ಟಿಕೆಟ್ ಬುಕ್ ಮಾಡಿದ ಮರುದಿನವೇ ಫ್ಲೈಟ್ ರೇಟ್ ಕಡಿಮೆಯಾದರೆ ಆಗುವ ಬೇಸರ ಅಷ್ಟಿಷ್ಟಲ್ಲ. ವಿಮಾನ ಪ್ರಯಾಣಿಕರ ಈ ‘ಟಿಕೆಟ್ ದರದ ಆತಂಕ’ವನ್ನು ದೂರ ಮಾಡಲು ಪ್ರಸಿದ್ಧ ಟ್ರಾವೆಲ್ ಆ್ಯಪ್ ‘ಮೇಕ್‌ಮೈಟ್ರಿಪ್’ ಭರ್ಜರಿ ಫೀಚರ್ ಒಂದನ್ನು ಪರಿಚಯಿಸಿದೆ.

ಅದೇ ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’.

Related posts

rachita-ram-birthday-bull-bull-fans-cutouts-celebration

ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್‌ಡೇ ಸಂಭ್ರಮ; ನೆಚ್ಚಿನ ನಟಿಗಾಗಿ ಹಾಡು, ಸಾಲು ಸಾಲು ಕಟೌಟ್‌ಗಳ ವೈಭವ!

October 4, 2026
great-indian-brew-festival-2026-bengaluru-beer-live-music-food

50 ಬಗೆಯ ಬಿಯರ್, ಲೈವ್ ಮ್ಯೂಸಿಕ್, ಬಗೆಬಗೆಯ ಖಾದ್ಯ: ಬೆಂಗಳೂರಿನ ‘ಬ್ರೂ ಫೆಸ್ಟಿವಲ್’ಗೆ ಯುವಜನತೆ ಫಿದಾ!

October 4, 2026

ಏನಿದು ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’?

ನೀವು ‘ಮೇಕ್‌ಮೈಟ್ರಿಪ್’ ಆ್ಯಪ್‌ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿದ ನಂತರ, ಆ ಟಿಕೆಟ್‌ನ ಬೆಲೆ ಕಡಿಮೆಯಾದರೆ, ವ್ಯತ್ಯಾಸದ ಹಣವನ್ನು ಕಂಪನಿಯೇ ನಿಮಗೆ ವಾಪಸ್ ಮಾಡಲಿದೆ. ಇದರಿಂದಾಗಿ, ಟಿಕೆಟ್ ಬೆಲೆ ಇಳಿಯುವವರೆಗೆ ಕಾಯುವ ಬದಲು, ಗ್ರಾಹಕರು ನೆಮ್ಮದಿಯಾಗಿ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಯಾವ್ಯಾವ ಫ್ಲೈಟ್‌ಗಳಿಗೆ ಇದು ಲಭ್ಯ?

ಈ ಸೌಲಭ್ಯವು ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಲಭ್ಯವಿದೆ. ಒನ್ ವೇ (ಏಕಮುಖ) ಹಾಗೂ ರೌಂಡ್ ಟ್ರಿಪ್ (ಹೋಗಿ – ಬರುವ) ಎರಡೂ ಬಗೆಯ ಟಿಕೆಟ್‌ಗಳಿಗೂ ಇದನ್ನು ಬಳಸಬಹುದು.

ಶುಲ್ಕ ಮತ್ತು ರೀಫಂಡ್ ಮಿತಿ ಎಷ್ಟು?

ಬುಕ್ಕಿಂಗ್ ಮಾಡುವಾಗಲೇ ನೀವು ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’ ಆಯ್ಕೆಯನ್ನು ಆಯ್ದುಕೊಳ್ಳಬೇಕು.

ದೇಶೀಯ ವಿಮಾನಗಳಿಗೆ ಪ್ರತಿ ಪ್ರಯಾಣಿಕನಿಗೆ ಕನಿಷ್ಠ 229 ರೂ. ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ 349 ರೂ. ಪಾವತಿಸಿ ಈ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು.

ಟಿಕೆಟ್ ಬೆಲೆ ಕಡಿಮೆಯಾದರೆ, ದೇಶೀಯ ವಿಮಾನಗಳಿಗೆ ಗರಿಷ್ಠ 2,500 ರೂ. ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಗರಿಷ್ಠ 3,000 ರೂ. (ಪ್ರತಿ ಪ್ರಯಾಣಿಕನಿಗೆ) ವರೆಗೆ ರೀಫಂಡ್ ಸಿಗಲಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ನೀವು ಟಿಕೆಟ್ ಬುಕ್ ಮಾಡಿದ ಸಮಯದಿಂದ ಹಿಡಿದು, ನಿಮ್ಮ ವಿಮಾನ ಹೊರಡುವ 6 ಗಂಟೆಗಳ ಮುಂಚಿನವರೆಗೂ ಈ ಕೊಡುಗೆ ಅನ್ವಯವಾಗುತ್ತದೆ. ಈ ಅವಧಿಯಲ್ಲಿ ಟಿಕೆಟ್ ಬೆಲೆ ಕಡಿಮೆಯಾದರೆ, ಮೇಕ್‌ಮೈಟ್ರಿಪ್ ಕಡೆಯಿಂದಲೇ ಗ್ರಾಹಕರಿಗೆ ನೇರವಾಗಿ ನೋಟಿಫಿಕೇಶನ್ ಬರುತ್ತದೆ. ಆ ಹೆಚ್ಚುವರಿ ಹಣ ನೀವು ಬುಕ್ ಮಾಡಲು ಬಳಸಿದ ಮೂಲ ಪಾವತಿ ಖಾತೆಗೆ ಜಮೆಯಾಗುತ್ತದೆ.

ಭಾರತೀಯರು ಸಾಮಾನ್ಯವಾಗಿ ಫ್ಲೈಟ್ ಟಿಕೆಟ್ ಬುಕ್ ಮಾಡುವಾಗ ಬೆಲೆಗಳ ಬಗ್ಗೆ ಪದೇ ಪದೇ ಚೆಕ್ ಮಾಡುತ್ತಾರೆ. ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕೊನೆಯ ಕ್ಷಣದವರೆಗೂ ಕಾಯುತ್ತಾರೆ. ಇದರಿಂದಾಗಿ ಕೊನೆ ಘಳಿಗೆಯಲ್ಲಿ ಟಿಕೆಟ್ ಸಿಗದೆ ಪರದಾಡುವ ಪರಿಸ್ಥಿತಿಯೂ ಬರುತ್ತದೆ. ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡುವ ಅಭ್ಯಾಸವನ್ನು ಬೆಳೆಸಲು ಮತ್ತು ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸಲು ಈ ಫೀಚರ್ ಪರಿಚಯಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಮೇಕ್‌ಮೈಟ್ರಿಪ್‌ನ ಫ್ಲೈಟ್ಸ್ ವಿಭಾಗದ ಸಿಒಒ ರಾಜ್ ರಿಷಿ ಸಿಂಗ್, “ವಿಮಾನದ ಟಿಕೆಟ್ ಬುಕ್ ಮಾಡುವಾಗ ಬೆಲೆ ಕಡಿಮೆಯಾಗಬಹುದು ಎಂಬ ಆತಂಕ ಗ್ರಾಹಕರಿಗೆ ಇರಬಾರದು. ಈ ಹೊಸ ಫೀಚರ್‌ನಿಂದಾಗಿ ಪ್ರಯಾಣಿಕರು ತಮಗೆ ಬೇಕಾದಾಗ ಟಿಕೆಟ್ ಬುಕ್ ಮಾಡಬಹುದು. ಬೆಲೆ ಕಡಿಮೆಯಾದರೆ ಹಣ ವಾಪಸ್ ಸಿಗುತ್ತದೆ ಎಂಬ ನೆಮ್ಮದಿ ಅವರಿಗಿರುತ್ತದೆ,” ಎಂದು ತಿಳಿಸಿದ್ದಾರೆ.

‘ಮೇಕ್‌ಮೈಟ್ರಿಪ್’ ಈಗಾಗಲೇ ಗ್ರಾಹಕರಿಗಾಗಿ ‘ಝೀರೋ ಕ್ಯಾನ್ಸಲೇಶನ್’ ಮತ್ತು ‘ಉಚಿತ ಡೇಟ್ ಚೇಂಜ್’ನಂತಹ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಆ ಸಾಲಿಗೆ ಈ ಹೊಸ ‘ಪ್ರೈಸ್ ಡ್ರಾಪ್ ಪ್ರೊಟೆಕ್ಷನ್’ ಸೇರ್ಪಡೆಯಾಗಿದ್ದು, ವಿಮಾನ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ShareTweetSendShare
Join us on:

Related Posts

rachita-ram-birthday-bull-bull-fans-cutouts-celebration

ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್‌ಡೇ ಸಂಭ್ರಮ; ನೆಚ್ಚಿನ ನಟಿಗಾಗಿ ಹಾಡು, ಸಾಲು ಸಾಲು ಕಟೌಟ್‌ಗಳ ವೈಭವ!

by admin
October 4, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರ ಜನ್ಮದಿನದ ಸಂಭ್ರಮ ಈ ಬಾರಿ ರಾಜರಾಜೇಶ್ವರಿನಗರದಲ್ಲಿ ಮುಗಿಲು ಮುಟ್ಟಿತ್ತು. ಅಕ್ಟೋಬರ್ 3 ರಂದು ತಮ್ಮ...

great-indian-brew-festival-2026-bengaluru-beer-live-music-food

50 ಬಗೆಯ ಬಿಯರ್, ಲೈವ್ ಮ್ಯೂಸಿಕ್, ಬಗೆಬಗೆಯ ಖಾದ್ಯ: ಬೆಂಗಳೂರಿನ ‘ಬ್ರೂ ಫೆಸ್ಟಿವಲ್’ಗೆ ಯುವಜನತೆ ಫಿದಾ!

by admin
October 4, 2026
0

ಬೆಂಗಳೂರು: ತನ್ನ ವಿಶಿಷ್ಟ ಪಬ್ ಹಾಗೂ ಲೈಫ್‌ಸ್ಟೈಲ್ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ 'ಅಕ್ಟೋಬರ್‌ಫೆಸ್ಟ್‌' ಸಂಭ್ರಮ ಇತ್ತೀಚೆಗೆ ನಡೆಯಿತು. 'ಬಜ್ಜಿನ್‌ಆನ್' ಸಹಯೋಗದೊಂದಿಗೆ ನಗರದ...

bengaluru-ganesh-chaturthi-laddu-modak-instamart-33860-order

ಮೋದಕ ಬಿಟ್ಟು ಲಡ್ಡುವಿಗೆ ಜೈ ಎಂದ ಬೆಂಗಳೂರಿಗರು; ಗಣೇಶ ಹಬ್ಬಕ್ಕೆ ಬಂತು ₹33,000ದ ಒಂದೇ ಆರ್ಡರ್!

by admin
October 4, 2026
0

ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಜನತೆ ಸಂಪ್ರದಾಯದ ಜೊತೆಗೆ ಆಧುನಿಕ ಜೀವನಶೈಲಿಯನ್ನೂ ಮೇಳೈಸಿ ಹಬ್ಬ ಆಚರಿಸಿದ್ದಾರೆ. ವಿಶೇಷವೆಂದರೆ, ಗಣಪತಿಗೆ ಅತ್ಯಂತ ಪ್ರಿಯವಾದ...

indian-diabetes-patients-central-obesity-protein-deficiency-study

ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆಯ ಬೊಜ್ಜು, ಪ್ರೋಟೀನ್ ಕೊರತೆಯೇ ಬಹುದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!

by admin
October 4, 2026
0

ಬೆಂಗಳೂರು: ಭಾರತದಲ್ಲಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಅತಿಯಾದ ಕಾರ್ಬೋಹೈಡ್ರೇಟ್ ಸೇವನೆ, ಹೊಟ್ಟೆಯ ಭಾಗದ ಬೊಜ್ಜು (ಸೆಂಟ್ರಲ್ ಒಬೆಸಿಟಿ), ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿರುವುದು (ಇನ್ಸುಲಿನ್ ರೆಸಿಸ್ಟೆನ್ಸ್)...

java-yezdi-bsa-new-bikes-festive-season-2026

ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

by admin
October 4, 2026
0

ಬೆಂಗಳೂರು: ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಬೈಕ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಾದ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್‌ಗಳು ಹಬ್ಬದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram