Junior NTR : ಕನ್ನಡಕ್ಕೂ ಬರುತ್ತಾರಂತೆ ಜೂನಿಯರ್ ನಂದಮೂರಿ ತಾರಕ್
ಟಾಲಿವುಡ್ ನ ಸ್ಟಾರ್ ನಟ ಜ್ಯೂ NTR ಅವರ ಕನ್ನಡ ಪ್ರೇಮ ನಿಮಗೆ ಗೊತ್ತೇ ಇದೇ, ಕನ್ನಡದವರೇ ಎನ್ನುವಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರ ತಾಯಿ ಕರ್ನಾಟಕದ ಮೂಲದವರೇ ಎಂಬುದು ಗೊತ್ತೇ ಇದೆ. ಅಪ್ಪು ಜೊತೆಗೆ ಒಳ್ಳೆಯ ಬಾಂಧವ್ಯವೂ ಇತ್ತು.. ಅಲ್ಲದೇ ಕನ್ನಡದಲ್ಲಿ ಗೆಳೆಯ ಗೆಳೆಯ ಹಾಡನ್ನೂ ಕೂಡ ಹಾಡಿದ್ದರು.
ಇದೀಗ ತಾರಕ್ ಕುರಿತಂತೆ ಕನ್ನಡಿಗರು ಮತ್ತೊಮ್ಮೆ ಖುಷಿ ಪಡೋ ಸುದ್ದಿ ಬರುತ್ತಿದೆ. ಟಾಲಿವುಡ್ ನ ‘ತಾರಕ್’ ಚಂದನವನಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ..
ತಾರಕ್ ನಟನೆಯ 31ನೇ ಸಿನಿಮಾಗೆ ಕನ್ನಡದ KGF ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಲಿದ್ದಾರೆ.. ಈ ಸಿನಿಮಾ ಪ್ಯಾನ್ ಇಂಡಿಯಾ ಆಗಲಿದ್ದು , ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆಯ ಶೂಟ್ ಆಗಲಿದೆ ಎಂದು ಮೂಲಗಳು ಹೇಳುತ್ತಿದೆ. ಈ ಸುದ್ದಿ ನಿಜವಾದರೇ ಯಂಗ್ ಟೈಗರ್ ಎನ್ ಟಿ ಆರ್ ಕನ್ನಡಕ್ಕೆ ಕಾಲಿಡಲಿದ್ದಾರೆ.
ಅಂದ್ಹಾಗೆ ಈಗಾಗಲೇ RRR ಸಿನಿಮಾದ ಕನ್ನಡ ಆವೃತ್ತಿಗೂ ಜ್ಯೂ. NTR ಸ್ವತಃ ಧ್ವನಿ ನೀಡಿ ಗಮನ ಸೆಳೆದಿದ್ದಾರೆ. Junior NTR