ನವದೆಹಲಿ : ಸವಾಲುಗಳನ್ನು ಸ್ವೀಕರಿಸುವವರು ಮಾತ್ರ ಅಂತಿಮವಾಗಿ ವಿಜೇತರಾಗುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನಡೆದ ವಾಣಿಜ್ಯ ಮಂಡಳಿಯ 95 ನೇ ವಾರ್ಷಿಕೋತ್ಸವವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿ, ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೊನಾ ಸೋಂಕಿನಿಂದಾಗಿ ದೇಶ ಈಗ ಸವಾಲು ಎದುರಿಸುತ್ತಿದೆ, ಆತ್ಮ ನಿರ್ಬಾರ್ನಿಂದ ಪ್ರೇರಿತರಾಗಿ ಭಾರತ ನಿರಂತರವಾಗಿ ಯಶಸ್ಸಿಗೆ ಪ್ರಯತ್ನಿಸಬೇಕು. ಸಮಸ್ಯೆಗಳಿಗೆ ಅಂಜಿದರೆ ಮುಂದೆ ನಡೆಯುವುದು ಕಷ್ಟವಾಗುತ್ತದೆ. ನಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಮಯವಿದು. ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದರು.








