ಬೆಂಗಳೂರು : ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ವಿಪಲವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಅವರು, ಕರ್ನಾಟಕ ರಾಜ್ಯ ಸರ್ಕಾರವು ಮಾನ್ಯ ಸುಪ್ರೀಂಕೋರ್ಟ್ ರಿಟ್ ಪಿಟಿಷನ್ ಸಂಖ್ಯೆ 318/2018 ದಿನಾಂಕ 19-03-2018ರ ಅದೇಶಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿಪಲವಾಗಿರುತ್ತದೆ. ನಾನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಪಿಟಿಷನ್ ಸಂಖ್ಯೆ 6742/2020 ರಲ್ಲಿ ರಾಜ್ಯ ಸರ್ಕಾರ ತನ್ನ ಹೇಳಿಕೆಯನ್ನು ದಾಖಲಿಸಿದ್ದು ಕಟ್ಟಡ ಕಾರ್ಮಿಕರ ಖಾತೆಗೆ 5000 ರೂಪಾಯಿಗಳನ್ನು ವರ್ಗವಣೆಯನ್ನು ಮಾಡಿತ್ತಿರುವುದಾಗಿ ತಿಳಿಸಿರುತ್ತದೆ.
ರಾಜ್ಯದಲ್ಲಿ 2180394 ಫಲಾನುಭವಿ ಕಾರ್ಮಿಕರು ನೋಂದವಣಿ ಆಗಿದ್ದಾರೆ. ಇದರಲ್ಲಿ 1239450 ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. 940000 ಕಟ್ಟಡ ಕಾರ್ಮಿಕರು ಪ್ರಯೋಜನವನ್ನು ಪಡೆದುಕೊಂಡಿಲ್ಲವೆಂದು ರಾಜ್ಯ ಸರ್ಕಾರ ತಿಳಿಸಿರುತ್ತದೆ. ಅಲ್ಲದೇ ನೋಂದವಣೆ ಗೋಂಡಿರುವ ಎಲ್ಲ ಕಾರ್ಮಿಕರಿಗೆ ಅರ್ಥಿಕ ಸೌಲಭ್ಯ ಕಲ್ಪಿಸುವುದಾಗಿ ನ್ಯಾಯಲಯಕ್ಕೆ ತಿಳಿಸಿರುತ್ತಾರೆ.
ರಾಜ್ಯದಲ್ಲಿ ಇರುವ 230 ಹಿರಿಯ ಕಾರ್ಮಿಕ ತನಿಖಾ ಆಧಿಕಾರಿಗಳಿಗೆ ಕಾರ್ಮಿಕ ಪಲಾನುಭವಿಗಳ ನೋಂದವಣಿಗೆ ಅವಕಾಶ ಕಲ್ಪಿಸಿಲಾಗಿದ್ದು ಕಾರ್ಮಿಕರ ಅನ್ಲೈನ್ ನೋಂದವಣೆಗೆ ಅವಕಾಶ ಕಲ್ಪಿಸಿರುದಾಗಿ ಮತ್ತು ಸದರಿ ಅಧಿಕಾರಿಗಳ ಈ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಲಾಗಿದೆ. ಆದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸುಫ್ರಿಂಕೋರ್ಟ್ ಅದೇಶಕ್ಕೆ ಅನುಗುಣವಾಗಿ ಸುಮಾರು 51 ವರ್ಗದ ಕಾರ್ಮಿಕರನ್ನು ಗುರುತಿಸಬೇಕಾಗಿದ್ದು ಸೇಕ್ಸನ್ 22ರ ಅಡಿಯಲ್ಲಿ ಕಾರ್ಮಿಕರಿಗೆ ನಿಯಮ ಅನುಸಾರ ಸೌಲಭ್ಯವನ್ನು ಒದಗಿಸಬೇಕಾಗಿದೆ.
ಇದುವರಗೆ ನೋಂದಾಯಿತವಾಗಿರುವ ಕಾರ್ಮಿಕರಿಗೂ ಪೂರ್ಣ ಪ್ರಮಾಣದಲ್ಲಿ ಅವರ ಖಾತೆಗೆ ಹಣ ವರ್ಗವಣೆ ಆಗಿರುವುದಿಲ್ಲ. ಮಾನ್ಯ ಉಚ್ಚ ನ್ಯಾಯಲಯವು ಮೇಲಿನ ಪ್ರಕರಣದಲ್ಲಿ ಕೋವಿಡ್-19ರ ಹಿನ್ನಲೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಐದು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ವರ್ಗಯಿಸಲು ಮದ್ಯಂತರ ಅದೇಶ ಮಾಡಿರುತ್ತದೆ. ಕಾರ್ಮಿಕ ಇಲಾಖೆ ನ್ಯಾಯಲಯದ ಅದೇಶವನ್ನು ಪಾಲನೆ ಮಾಡಲು ವಿಫಲವಾಗಿರುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ಕಟ್ಟಡ ಕಾರ್ಮಿಕರಿಗೆ ದೊರೆಯಬಹುದಾದ ಶಾಸನ ಬದ್ಧ ಪ್ರಯೋಜನಗಳ ಮಾಹಿತಿಯನ್ನು ನೀಡಿರುವುದಿಲ್ಲ.
ಅದ್ದರಿಂದ ತಾವು ದಯಾಮಾಡಿ ಕಾರ್ಮಿಕ ಇಲಾಖೇಯ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮಾನ್ಯ ಉಚ್ಚ ನ್ಯಾಯಲಯದ ಅದೇಶಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಇರುವ ಕಟ್ಟಡ ಕಾರ್ಮಿಕರು ಹಾಗೂ ಅದರ ಅಡಿಯಲ್ಲಿ ಬರುವ ಎಲ್ಲಾ ಉಪಕಾರ್ಮಿಕರಿಗೆ ಐದು ಸಾವಿರ ರೂಪಾಯಿಗಳನ್ನು ವರ್ಗವಣೆ ಮಾಡಲು ನಿರ್ದೇಶನ ನೀಡಬೇಕು ಎಂದು ಸರ್ಕಾರವನ್ನು ರಮೇಶ್ ಬಾಬು ಒತ್ತಾಯಿಸಿದ್ದರು.








