KSRTC
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅತ್ತಿವಟ್ಟ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಗಾತ ಸಂಭವಿಸಿದ್ದು 15 ಮಂದಿ ಗಾಯಗೊಂಡಿದ್ದಾರೆ.
ಬಸ್ ಹಳ್ಳಕ್ಕೆ ಬಿದ್ದಿದ್ದರಿಂದಾಗಿ ಮೂವರ ಸ್ಥಿತಿ ಗಂಭೀರವಾಗಿದೆ ಈ ಘಟನೆಯು ಕೋಲಾರದ ಹೊಸಕೋಟೆಯ ಹೆದ್ದಾರಿ ಸಂಖ್ಯೆ 75 ರ ಅತ್ತಿವಟ್ಟ ಬಳಿ ಘಟನೆ ನಡೆದಿದೆ
KSRTC ಬಸ್ ಮಂತ್ರಾಲಯ ದಿಂದ ಕೋಲಾರ (Kolar) ಕ್ಕೆ ಹೋಗುತ್ತಿತ್ತು ಚಾಲಕನ ಅಜಾಗರೂಕತೆಯಿಂದ ಈ ಘಟನೆ ಎಂದು ತಿಳಿದು ಬಂದಿದೆ.
ಹೆದ್ದಾರಿಯಲ್ಲಿ ಅತೀ ವೇಗವಾಗಿ ಬಂದ ಬಸ್ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಬಂದು ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಇಳಿದಿದೆ. ಈ ರಭಸಕ್ಕೆ ಬಸ್ ನಲ್ಲಿದ್ದ ಎಲ್ಲರೂ ಸಹ ಚೆಲ್ಲಾಪಿಲ್ಲಿಯಾಗಿ ಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಹೊಸಕೋಟೆ ಪೊಲೀಸರು ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆ ಯಿಂದ ಹೆದ್ದಾರಿಯಲ್ಲಿ ನಡೆದಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.