Fifa WorldCup : ಫ್ರಾನ್ಸ್ ಗೆ ಟ್ಯುನಿಶಿಯಾ ಎದುರಾಳಿ
ಡಿ ಗುಂಪಿನಲ್ಲಿ ಇಂದು ಟ್ಯುನೀಶಿಯಾ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಡೆನ್ಮಾರ್ಕ್ ವಿರುದ್ಧ ಡ್ರಾ ಸಾಸಿ ನಂತರ ಆಸ್ಟ್ರೇಲಿಯಾ ವಿರುದ್ಧ 0-1 ಅಂತರದಿಂದ ಸೋತಿದ್ದ ಟ್ಯುನೀಶಿಯಾ 16 ಹಂತಕ್ಕೆ ಹೋಗಬೇಕಿದ್ದಲ್ಲಿ ಈ ಪಂದ್ಯವನ್ನು ಗೆಲ್ಲಬೇಕಿದೆ.
ಫ್ರಾನ್ಸ್ ಈಗಾಗಲೇ 16ರ ಘಟ್ಟ ತಲುಪಿದ್ದು ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೋರಾಡಲಿದೆ.
ಆಸಿಸ್, ಡೆನ್ಮಾರ್ಕ್ ಕಾದಾಟ
ಡಿ ಗುಂಪಿನಲ್ಲಿ ಆಸ್ಟ್ರೇಲಿಯಾ ತಂಡ ಇಂದು ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವನ್ನು ಗೆದ್ದು 16ರ ಸುತ್ತಿಗೆ ಹೋಗಲು ಸಜ್ಜಾಗಿದೆ.ಒಂದು ವೇಳೆ ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡು ಟ್ಯುನೀಶಿಯಾ ಫ್ರಾನ್ಸ್ ವಿರುದ್ಧ ಸೋತರೆ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಇನ್ನು ಫ್ರಾನ್ಸ್ ವಿರುದ್ಧ ಸೋತಿದ್ದ ಡೆನ್ಮಾರ್ಕ್ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಜೊತೆಗೆ ಟ್ಯುನೇಶಿಯಾ ತಂಡ ಗೆದ್ದರೆ ಭಾರೀ ಅಂತರದಿಂದ ಡೆನ್ಮಾರ್ಕ್ ಗೆಲ್ಲಬೇಕಾಗುತ್ತದೆ.
ಸೌದಿ ಅರೇಬಿಯಾ, ಮೆಕ್ಸಿಕೊಗೆ ಕೊನೆಯ ಅವಕಾಶ
ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಸೌದಿ ಅರೇಬಿಯಾ ಮತ್ತು ಮೆಕ್ಸಿಕೊ ತಂಡಗಳಿಗೆ ಕೊನೆಯ ಅವಕಾಶ. ಸೌದಿ ಅರೇಬಿಯಾ ನಾಕೌಟ್ ಹಂತಕ್ಕೆ ಹೋಗಬೇಕಿದ್ದಲ್ಲಿ ಈ ಪಂದ್ಯವನ್ನು ಗೆಲ್ಲಬೇಕು. ಜೊತೆಗೆ ಅರ್ಜೆಂಟಿನಾ ಇಂದಿನ ಪಂದ್ಯವನ್ನು ಸೋಲಬೇಕಿದೆ.
ಇನ್ನು ಮೆಕ್ಸಿಕೊ ತಂಡ ಈ ಪಂದ್ಯವನ್ನು ಗೆಲ್ಲುವ ಜೊತೆಗೆ ಮತ್ತೊಂದು ಪಂದ್ಯದಲ್ಲಿ ಪೋಲೆಂಡ್ ಕೂಡ ಗೆದ್ದರೆ ಮಾತ್ರ ನಾಕೌಟ್ ಅವಕಾಶವಿದೆ.