ಕೊರೋನಾ ವೈರಸ್ ಗೆ ವುಹಾನ್ ನ ಆಸ್ಪತ್ರೆಯ ನಿರ್ದೇಶಕರೇ ಅಸುನೀಗಿದ್ದಾರೆ. ಕೊರೊನಾ ವೈರಸ್ ನ ಮೂಲ ಸ್ಥಳವಾಗಿದ್ದ ವುಹಾನ್ ನಲ್ಲಿ ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಮತ್ತು ವೈದ್ಯ ಲಿಯು ಝಿಮಿಂಗ್ ಅವರು ಸಾವನ್ನಪ್ಪಿದಾರೆ. ಅವರನ್ನು ರಕ್ಷಿಸುವ ಎಲ್ಲಾ ಪ್ರಯತ್ನವು ವಿಫಲವಾಗಿರುವುದಾಗಿ ಸ್ಟೇಟ್ ಬ್ರಾಡ್ ಕಾಸ್ಟರ್ ಸಿಸಿಟಿವಿ ವರದಿ ಮಾಡಿದೆ. ಈ ವೈರಸ್ ಗೆ ಈವರೆಗೆ 1900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 72 ಸಾವಿರ ಮಂದಿ ವೈರಸ್ ಗೆ ತುತ್ತಾಗಿದ್ದಾರೆ. ಇದೇ ವೇಳೆ ಹ್ಯುಬೆ ಪ್ರಾಂತ್ಯದಲ್ಲಿ ಮಂಗಳವಾರ 93 ಸಾವು ಮತ್ತು 1807 ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಚೀನಾದ ಹಲವು ವಿಮಾನಯಾನ ಸಂಸ್ಥೆಗಳು 78000 ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ.
ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ
ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...








