Gujarat Election Result : ಮುಂದುವರೆದ ಬಿಜೆಪಿ ಓಟ – ರವೀಂದ್ರ ಜಡೇಜಾ ಪತ್ನಿ ರಿವಾಬ ಮುನ್ನಡೆ..
ಗುಜರಾತ್ ವಿಧಾನ ಸಭಾ ಚುನಾವಣಾ ಮತ ಎಣಿಕೆ ಮುಂದುವರೆದಿದೆ…. 182 ಸ್ಥಾನಗಳಿಗಾಗಿ ನಡದ ಚುನಾವಣೆಯ ಆರಂಭಿಕ ಟ್ರೆಂಡ್ ಗಳಲ್ಲಿ ಬಿಜೆಪಿ ಏಕಪಕ್ಷೀಯ ಮುನ್ನಡೆ ಸಾಧಿಸುತ್ತಿದೆ. ಬಿಜೆಪಿ 138 ಮತ್ತು ಕಾಂಗ್ರೆಸ್ 33 ಸ್ಥಾನಗಳಲ್ಲಿ ಮುಂದಿದೆ. ಆಮ್ ಆದ್ಮಿ ಪಕ್ಷ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಮತ್ತೆ ಜಾಮ್‌ನಗರದಿಂದ ಮುನ್ನಡೆ ಸಾಧಿಸಿದ್ದಾರೆ. ಸಿಎಂ ಭೂಪೇಂದ್ರ ಪಟೇಲ್ ಅಹಮದಾಬಾದ್‌ನಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಹಾರ್ದಿಕ್ ಪಟೇಲ್ ವಿರಾಮಗಾಂನಿಂದ ಹಿಂದುಳಿದಿದ್ದಾರೆ.
ಗುಜರಾತ್‌ನಲ್ಲಿ ಬೆಳಿಗ್ಗೆ 8 ಗಂಟೆಗೆ ಮೊದಲು ಅರ್ಧ ಗಂಟೆಯಲ್ಲಿ ಅಂಚೆ ಮತಪತ್ರಗಳನ್ನು ಎಣಿಸಲಾಗಿದೆ. ಇದಾದ ಬಳಿಕ ಇವಿಎಂನಿಂದ ಎಣಿಕೆ ಆರಂಭವಾಯಿತು. ಈ ಬಾರಿ ರಾಜ್ಯದಲ್ಲಿ ಎರಡೂ ಹಂತಗಳಲ್ಲಿ ಶೇ.64.3ರಷ್ಟು ಮತದಾನ ನಡೆದಿದೆ. ಇದು ಕಳೆದ ಬಾರಿಯ 69.2% ಕ್ಕಿಂತ ಸುಮಾರು 5% ಕಡಿಮೆಯಾಗಿದೆ.
Gujarat Election Result : Continued BJP race – Ravindra Jadeja’s wife Rivaba leads..








