Himachal pradesh Election Result : ‘ಕೈ’ಗೆ ಮ್ಯಾಜಿಕ್ ನಂಬರ್..!! ಛತ್ತೀಸ್ ಗಢಕ್ಕೆ ಶಾಸಕರು ಶಿಫ್ಟ್..??
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ 2022 ನೇ ಸಾಲಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ..
ಬೆಳಿಗ್ಗೆ ಇಂದಲೇ ಮತ ಎಣಿಕೆ ನಡೆಯುತ್ತಿದೆ..
ಸದ್ಯಕ್ಕೆ
ಬಿಜೆಪಿ – 26
ಕಾಂಗ್ರೆಸ್ – 39
ಆಪ್ -0
ಇತರೇ 3
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮ್ಯಾಜಿಕ್ ನಂಬರ್ ಈಗಾಗಲೇ ಸಿಕ್ಕಾಗಿದೆ.. ಸ್ಪಷ್ಟ ಬಹುಮತ ಬರುತ್ತಿದ್ದಂತೆ ಶಾಸಕರನ್ನು ಛತ್ತೀಸ್ ಗಢಕ್ಕೆ ಶಿಫ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ 40, ಬಿಜೆಪಿ 25, ಇತರರು 3 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ. ಮತ 12 ಗಂಟೆಯ ನಂತರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿದ್ದು 35 ಸ್ಥಾನಗಳು ಸ್ಪಷ್ಟ ಬಹುಮತ..
ಮತ್ತೊಂದೆಡೆ ಆಪರೇಷನ್ ಕಮಲದ ಭೀತಿಯೂ ಕಾಂಗ್ರೆಸ್ ಗೆ ಇರಬಹುದು.. ಹೀಗಾಗಿ ಕಾಂಗ್ರೆಸ್ ಅಧಿಕಾರದ ಛತ್ತೀಸ್ ಗಢಕ್ಕೆ ಶಾಸಕರನ್ನು ಶಿಫ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗ್ತಿದೆ..
ಹಾಗೆ ನೋಡಿದ್ರೆ ಹಿಮಾಚಲ ಪ್ರದೇಶ ರಾಜಕೀಯ , ಎಲೆಕ್ಷನ್ ಇತಿಹಾಸ ವಿಶೇಷತೆ ನೋಡಿದ್ರೆ , ಹಿಮಾಚಲ ಪ್ರದೇಶದಲ್ಲಿ 30 ವರ್ಷಗಳಿಂದ ಯಾವ ಪಕ್ಷವೂ ಸತತವಾಗಿ ಎರಡು ಬಾರಿ ಅಧಿಕಾರದ ಗದ್ದುಗೇರಿಲ್ಲ.. ಈ ಟ್ರೆಂಡ್ ಬ್ರೇಕ್ ಮಾಡಲು ಬಿಜೆಪಿ ಮಿಷನ್ ರಿಪೀಟ್ ಅಭಿಯಾನವೂ ವಿಫಲವಾದಂತೆ ಕಾಣ್ತಿದೆ.. ಸ್ಪಷ್ಟ ಬಹುಮತ ಸಿಕ್ಕಿ ಕಾಂಗ್ರೆಸ್ ಈ ಬಾರಿ ಹಿಮಾಚಲ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ..
ಮ್ಯಾಜಿಕ್ ನಂಬರ್ 35 ಆಗಿದ್ದು , ಸದ್ಯಕ್ಕೆ ಕಾಂಗ್ರೆಸ್ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು , ಸಂಜೆ ವೇಳೆಗೆ ಒಂದು ಕಂಪ್ಲೀಟ್ ಚಿತ್ರಣ ಸಿಗಲಿದೆ..
ಅಂದ್ಹಾಗೆ ಆಪ್ ಹಿಮಾಚಲ ಪ್ರದೇಶದಲ್ಲಿ ಖಾತೆಯನ್ನೇ ತೆರೆದಿಲ್ಲ… ಆಮ್ ಆದ್ಮಿ ಪಾರ್ಟಿಯ ಜಾದೂ ಗುಡ್ಡ ಗಾಡು ರಾಜ್ಯದಲ್ಲಿ ನಡೆಯಲಿಲ್ಲ….








