Udupi Accident : ಬಸ್ – ಕಾರಿನ ನಡುವೆ ಅಪಘಾತ – ಮೂವರು ಸಾವು
ಬಸ್ – ಕಾರಿನ ನಡುವೆ ಅಪಘಾತ – ಮೂವರು ಸಾವು
ಉಡುಪಿಯ ಕಾರ್ಕಾಳದಲ್ಲಿ ಘಟನೆ
2 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು
(40 ) ನಾಗರಾಜ್ , (32) ಪ್ರತ್ಯುಷಾ ಮೃತ ದುರ್ದೈವಿಗಳು
ಧರ್ಮಸ್ಥಳದಿಂದ ಶೃಂಗೇರಿಗೆ ತೆರಳುತ್ತಿದ್ದಾಗ ಘಟನೆ
ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭಂವಿಸಿದ್ದು , ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ.. ಉಡುಪಿಯ ಕಾರ್ಕಾಳದಲ್ಲಿ ಈ ದಾರುಣ ಘಟನೆ ನಡೆದಿದೆ..
ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಜರುಗಿದೆ.. ಅಪಘಾತದಲ್ಲಿ 40 ವರ್ಷದ ನಾಗರಾಜ್ , 32 ವರ್ಷದ ಪ್ರತ್ಯುಷಾ , 2 ವರ್ಷದ ಪುಟ್ಟ ಮಗು ಮೃತ ದುರ್ದೈವಿಗಳಾಗಿದ್ದಾರೆ..
ಮೃತರು ಆಂಧ್ರಪ್ರದೇಶ ಮೂಲದವರಾಗಿದ್ದಾರೆ.. ಇವರು ಧರ್ಮಸ್ಥಳದಿಂದ ಶೃಂಗೇರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.. ಈ ಸಂಬಂಧ ಉಡುಪಿಯ ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ..
Udupi Accident , bus – Car Accident, 3 deid








