ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೈತರು ಬೇಕಾಗಿದ್ದಾರೆ…! ಪೋಸ್ಟರ್ ಫುಲ್ ವೈರಲ್

saaksha tv by saaksha tv
June 12, 2020
in Newsbeat, ರಾಜ್ಯ
Share on FacebookShare on TwitterShare on WhatsappShare on Telegram

ಮಂಡ್ಯ: ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಹೆಚ್ಚುತ್ತಾಹೋದಂತೆ ನಗರ ಪ್ರದೇಶಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರ ಸಂಖ್ಯೆ ಕಡಿಯಾಗುತ್ತಾ ಸಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಹೊಲದಲ್ಲಿ ದುಡಿಯುವ ಕೈಗಳೇ ಇಲ್ಲದ ಪರಿಸ್ಥಿತಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾಡಲಾರಂಭಿಸಿದೆ. ಪ್ರತಿ ತಿಂಗಳು ನಗರ-ಪಟ್ಟಣಗಳಲ್ಲಿ ಕೊಡುವ ಸಂಬಳವನ್ನು ನಾವೇ ಕೊಡುತ್ತೇವೆ, ರೈತರು ಬೇಕಾಗಿದ್ದಾರೆ. ತಿಂಗಳಿಗೆ 10ರಿಂದ 30 ಸಾವಿರ ಸಂಬಳ ಕೊಡುತ್ತೇವೆ, ನಮ್ಮ ದೂರವಾಣಿ ನಂಬರ್ ಸಂಪರ್ಕಿಸಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲಾಗುತ್ತಿದೆ.
ಹೌದು, ಇಂತಹದೊಂದು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯದಲ್ಲಿ ಹರಿಬಿಟ್ಟವರು ಮಂಡ್ಯ ಜಿಲ್ಲೆ ಪಾಂಡವಪುರದ 6 ಮಂದು ಯುವ ಉತ್ಸಾಹಿಗಳ ತಂಡ. ಈ ತಂಡದಲ್ಲಿ ಕಮಲೇಶ್, ದೀಪಕ್, ಮಹೇಶ್, ಶ್ರೀಕಾಂತ್, ಮೇಘ ಹಾಗೂ ಸೌಮ್ಯ ಒಳಗೊಂಡ ತಂಡ, ಗ್ರಾಸ್‍ರೂಟ್ ಆರ್ಗಾನಿಕ್ ಎಂಬ ಸಂಸ್ಥೆಯನ್ನ ಆರಂಭಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತೆಂಗಿನ ಎಣ್ಣೆ, ನೆಲಗಡಲೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ..ಹೀಗಾಗೆ ಹಳ್ಳಿಗಳಲ್ಲಿ ಸಿಗುವ ಎಣ್ಣೆ ಕಾಳುಗಳನ್ನು ಸಂಗ್ರಹಿಸಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡುವ ಯೋಜನೆ ರೂಪಿಸಿದರು. ಪರಿಶುದ್ಧವಾದ ಎಣ್ಣೆಯನ್ನು ಪ್ಯಾಕ್ ಮಾಡಿ ತಾವೇ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಾರಂಭಿಸಿದರು.
ಎಲ್ಲಾ ಆಹಾರ ಪದಾರ್ಥಗಳಲ್ಲಿ ರಾಯಾಯನಿಕ ಅಂಶ ಜಾಸ್ತಿಯಾಗುತ್ತಿರುವ ಈ ಕಾಲಮಾನದಲ್ಲಿ ನೈಸರ್ಗಿಕ ಉತ್ಪನ್ನಗಳತ್ತ ಜನರ ವಾಲಲು ಆರಂಭಿಸಿದ್ದಾರೆ. ಮನೆಯಲ್ಲೇ ಬಳೆದ, ನೈಸರ್ಗಿಕ ಉತ್ಪನ್ನಗಳಿಗೆ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಭಾರಿ ಬೇಡಿಕೆ ಇದೆ. ಇದನ್ನೇ ಅರಿತ ಯುವಕರ ತಂಡ, ಕಟ್ಟಪಟ್ಟು ಗಾಣದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡಲು ಆರಂಭಿಸಿದರು. ಮೊದಲು ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ಈಗಂತೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಕೊರೊನಾ ಮಹಾಮಾರಿ ತಡೆಗೆ ಮಾಡಲಾದ ಲಾಕ್‍ಡೌನ್‍ನಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳಲ್ಲಿದ್ದವರು ಕೆಲಸ ಕಳೆದುಕೊಂಡು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಳ್ಳಿಗಳಲ್ಲೇ ಬೆಳೆದ ಹಣ್ಣು-ತರಕಾರಿ ಸೇರಿದಂತೆ ವಿವಿಧ ಉತ್ಪಗಳನ್ನು ಆಪ್ ಮೂಲಕ ನೇರವಾಗಿ ಮಾರಾಟ ಮಾಡಿ ಉತ್ತಮ ಲಾಭ ಪಡೆದವರೂ ಇದ್ದಾರೆ.
ಹೀಗಾಗಿ ನೈಸರ್ಗಿಕ ಎಣ್ಣೆ ತೆಗೆದು ಮಾಡುತ್ತಿದ್ದ ಈ ಯುವಕರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನೈಸರ್ಗಿಕವಾಗಿ ಹಣ್ಣು-ತರಕಾರಿ ಬೆಳೆಯುವ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ರೈತರು ಬೇಕಾಗಿದ್ದಾರೆ..!
ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯಲು ಭೂಮಿ ಇದ್ದರೂ, ದುಡಿಯುವ ಕೈಗಳಿಗೆ ಕೊರತೆ ಇದೆ. ವರ್ಷಪೂರ್ತಿ ಹೊಲದಲ್ಲಿ ಕೆಲಸ ಮಾಡಿದರೂ ಮೂರು ಹೊತ್ತಿನ ತುತ್ತಿಗೂ ಪರದಾಡಬೇಕೆಂದು ಹಳ್ಳಿಗಳ್ಳಿ ಸರ್ವೇಸಾಮಾನ್ಯ. ಈ ಗ್ರಾಸ್‍ರೂಟ್ ಆರ್ಗಾನಿಕ್ ತಂಡದ ಸದಸ್ಯರೂ ಕೂಡ ಒಂದು ಕಾಲದಲ್ಲಿ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಲ್ಲಿ ಕೆಲಸ ಹುಡುಕಿಕೊಂಡು ವಲಸೆ ಹೋದವರೆ. ನಗರಗಳಲ್ಲೂ ಜೀವನ ಉತ್ತಮವಾಗಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಹುಟ್ಟೂರಿನಲ್ಲೇ ಸ್ವಂತ ಉದ್ಯೋಗ ಏಕೆ ಮಾಡಬಾರದು ಎಂದಾಗ ಹೊಳೆದದ್ದೇ ಗ್ರಾಸ್‍ರೂಟ್ ಆರ್ಗಾನಿಕ್.
ನೈಸರ್ಗಿಕವಾಗಿ ತೆಗೆದ ಎಣ್ಣೆ ಉತ್ಪನ್ನಗಳಿಗೆ ಡಿಮ್ಯಾಂಡ್ ಬರುತ್ತಿದ್ದಂತೆ ಉಳುಮೆ ಮಾಡಲು ಆಗದೇ ಬಿಟ್ಟಿದ್ದ ಜಮೀನಿನನ್ನೇ ಇಟ್ಟುಕೊಂಡು ಏನಾದರೂ ಒಂದು ಹೊಸ ಪ್ರಯತ್ನ ಮಾಡಲೇಬೇಕು ಎಂದು ಈ ಯುವಕರು ನಿರ್ಧಾರ ಮಾಡಿದರು. ಸುಮಾರು 10 ಎಕರೆ ಭೂಮಿಯಲ್ಲಿ ಹಣ್ಣು, ತರಕಾರಿ, ಸೊಪ್ಪು, ಎಣ್ಣೆಕಾಳುಗಳಲ್ಲಿ ಯಾವುದೇ ರಸಗೊಬ್ಬರ, ಕೀಟನಾಶಕ ಬಳಸದೇ ಬೆಳೆಯೋಣ ಎಂದು ಹೊರಟ ಯುವಕರಿಗೆ ಎದುರಾಗಿದ್ದು, ರೈತ ಕಾರ್ಮಿಕರ ಸಮಸ್ಯೆ.
ಹೊಲದಲ್ಲಿ ಕೆಲಸ ಮಾಡಲು ಬನ್ನಿ ಎಂದರೆ ಐದಾರು ಸಾವಿರ ಸಂಬಳಕ್ಕ ಬೆಂಗಳೂರು-ಮೈಸೂರಿಗೆ ಹೋಗಿ ಬರುವ ಯುವಕರನ್ನು ಕಂಡು ಈ ಯುವಕರು, ಬೆಂಗಳೂರಿನಂತಹ ನಗರಗಳಲ್ಲಿ ಕೊಡುವ ಸಂಬಳಕ್ಕಿಂತ ನಾವು ಹೆಚ್ಚೇ ಕೊಡುತ್ತೇವೆ. ತಿಂಗಳಿಗೆ 10 ಸಾವಿರದಿಂದ 30 ಸಾವಿರ ಕೊಡುತ್ತೇವೆ. ಕೆಲಸ ಮಾಡಲು ಇಚ್ಚಿಸುವವರು ಬನ್ನಿ ಎಂದು ಗೋಗರೆದರೂ ಅಂತಹ ಪ್ರತಿಕ್ರಿಯೆ ಏನೂ ಸಿಕ್ಕಿಲ್ಲ. ಆಗ ಹೊಳೆದದ್ದೇ ಸೋಷಿಯಲ್ ಮೀಡಿಯಾ.
ರೈತರು ಬೇಕಾಗಿದ್ದಾರೆ, ತಿಂಗಳಿಗೆ 10,000 ದಿಂದ 30,000 ರೂ. ಸಂಬಳ ಕೊಡುತ್ತೇವೆ ಎಂದು ಪೋಸ್ಟರ್ ಹಾಕಿದರು. ಈ ಪೋಸ್ಟರ್‍ಗೆ ಸಾಮಾಜಿಕ ತಾಲತಾಣಗಳಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ತಂಡನೈಸರ್ಗಿಕ ಕೃಷಿ ಚಟುವಟಿಕೆ ಆರಂಭಿಸಿದೆ. ಈ ಉತ್ಸಾಹಿ ತಂಡಕ್ಕೆ ಸಾಕ್ಷಾಟಿವಿ ಕಡೆಯಿಂದಲೂ ಗುಡ್‍ಲಕ್.
ಸಂಪರ್ಕಿಸಬೇಕಾದ ವಿಳಾಸ: 9844123344/9164468872

Related posts

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

August 14, 2026
reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
Tags: FarmersGrassroot OrganicMandya
ShareTweetSendShare
Join us on:

Related Posts

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 14, 2026
0

ದಿನ ಭವಿಷ್ಯ: 14-08-2026. ಮೇಷ ರಾಶಿ ಸಾಮಾನ್ಯ ಫಲ: ಇಂದು ನಿಮಗೆ ಉತ್ಸಾಹಭರಿತ ದಿನವಾಗಿರುತ್ತದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಆತ್ಮವಿಶ್ವಾಸ ಎದ್ದು ಕಾಣುತ್ತದೆ ಮತ್ತು ನಿಮ್ಮ...

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram