Cyber Crime : ಕಿಡ್ನಿ ಮಾರಲು ಹೋದ ವಿದ್ಯಾರ್ಥಿನಿಗೆ 16 ಲಕ್ಷ ಪಂಗನಾಮ….
ತಂದೆಯ ಸಾಲ ತೀರಿಸಲು ಯುವತಿಯೊಬ್ಬಳು ಮೂತ್ರಪಿಂಡ ಮಾರಲು ಮುಂದಾಗಿದ್ದು , 16 ಲಕ್ಷ ಕಳೆದುಕೊಂಡ ಘಟನೆ ಹೈದ್ರಾಬಾದ್ ನಲ್ಲಿದೆ ನಡೆದಿದೆ..
ಸೈಬರ್ ವಂಚಕರು ವಿದ್ಯಾರ್ಥಿನಿಗೆ 16 ಲಕ್ಷ ಪಂಗನಾಮ ಹಾಕಿದ್ದಾರೆ..
ಗುಂಟೂರಿನ ನರ್ಸಿಂಗ್ ವಿದ್ಯಾರ್ಥಿನಿಯು ತನ್ನ ತಂದೆ ಮಾಡಿದ್ದ 2 ಲಕ್ಷ ರೂಪಾಯಿ ಸಾಲ ತೀರಿಸಲು ತನ್ನ ಮೂತ್ರಪಿಂಡ ಮಾರಾಟ ಮಾಡಲು ಯತ್ನಿಸಿದ್ದಳು..
ಆಕೆಗೆ ವಂಚಕರು 3 ಕೋಟಿ ಆಫರ್ ನೀಡಿದ್ದಾರೆ. ಆದ್ರೆ ಅದಕ್ಕೂ ಮುನ್ನ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.
ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಪ್ರವೀಣ್ ರಾಜ್ ಎಂಬವನನ್ನ ಭೇಟಿಯಾಗಿದ್ದು, ಆತ ಶೇ.50 ರಷ್ಟು ಹಣವನ್ನು ಆಪರೇಷನ್‌ಗೆ ಮುಂಚಿತವಾಗಿ, ಉಳಿದ ಹಣವನ್ನು ಕೆಲಸ ಮುಗಿದ ನಂತರ ಕೊಡುವುದಾಗಿ ಹೇಳಿದ್ದಾನೆ.
ಹಣ ವರ್ಗಾವಣೆ ಮಾಡುವುದಕ್ಕಾಗಿ ಚೆನ್ನೈ ಸಿಟಿ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆ ಮೂಲಕ 16 ಲಕ್ಷ ಪಾವತಿಸಿದ ಬಳಿಕ ಹಣ ಕೇಳಿದ್ದಾಳೆ.
ನಂತರ ಹಣ ವಸೂಲಿ ಮಾಡಲು ದೆಹಲಿಗೆ ಹೋಗುವಂತೆ ಹೇಳಿದ್ದಾರೆ. ಆಕೆ ದೆಹಲಿಗೆ ತೆರಳಿದಾಗ ವಿಳಾಸ ಸಹ ನಕಲಿಯಾಗಿರುವುದು ಕಂಡುಬಂದಿದೆ.
ಇದಾದ ನಂತರ ಆಕೆ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ..
ಸಂತ್ರಸ್ತೆಯ ತಂದೆ ತನ್ನ ATM ಕಾರ್ಡ್ ಗಳಲ್ಲಿ ಒಂದನ್ನು ಮಗಳಿಗೆ ನೀಡಿದ್ದರು. ನವೆಂಬರ್ ನಲ್ಲಿ ಖಾತೆಯಿಂದ ಹಣ ತೆಗೆದುಕೊಂಡಿರುವ ಬಗ್ಗೆ ಅವರಿಗೆ ಗೊತ್ತಾಗಿದೆ.
ನಂತರ ಮಗಳನ್ನು ಮನೆಗೆ ಬರುವಂತೆ ಹೇಳಿದಾಗ, ಆಕೆ ಹಾಸ್ಟೆಲ್ ಬಿಟ್ಟು ಹೋಗಿರೋದು ತಿಳಿದುಬಂದಿದೆ.
ಬಳಿಕ ಹುಡುಕಾಟ ನಡೆಸಿದ್ದ ಎನ್ ಟಿಆರ್ ಜಿಲ್ಲೆಯ ಪೊಲೀಸರು ಜಗ್ಗಯ್ಯಪೇಟಾದಲ್ಲಿ ಆಕೆಯನ್ನ ಪತ್ತೆ ಹಚ್ಚಿದ್ದಾರೆ.. ಆಕೆ ತನ್ನ ಸ್ನೇಹಿತನ ಮನೆಯಲ್ಲಿ ಇದ್ದದ್ದು ಗೊತ್ತಾಗಿದೆ..
ಸದ್ಯ ಸೈಬರ್ ಕಳ್ಳರ ಬಗ್ಗೆ ಯುವತಿ ಗುಂಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..








