Belagavi : ಗಡಿ ಗಲಾಟೆ ಬೆನ್ನಲ್ಲೇ ಬೆಳಗಾವಿಗೆ ಮಹಾರಾಷ್ಟ್ರದ ಎನ್ ಸಿಪಿ ಶಾಸಕ ರೋಹಿತ್ ಪವಾರ್ ಭೇಟಿ
ಬೆಳಗಾವಿ : ಗಡಿ ಗಲಾಟೆ ಕೊಂಚ ಕಡಿಮೆಯಾದ ಬೆನ್ನಲ್ಲೇ ಬೆಳಗಾವಿಗೆ ಮಹಾರಾಷ್ಟ್ರದ ಎನ್ ಸಿಪಿ ಶಾಸಕ ರೋಹಿತ್ ಪವಾರ್ ಭೇಟಿ ನೀಡಿದ್ದಾರೆ.. ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಪವಾರ್ ಬೆಳಗಾವಿಗೆ ಭೇಟಿ ನೀಡಿದ್ದಾರೆ..
ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಭೇಟಿ ರದ್ದು ಖಂಡಿಸಿ ಈ ಹಿಂದೆ ಮಹಾವಿಕಾಸ ಅಘಾಡಿ ಪ್ರತಿಭಟನೆ ನಡೆಸಿದ್ದರು..
ರೋಹಿತ್ ಪವಾರ್ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಎನ್‌ಸಿಪಿ ಶಾಸಕ..
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮಧ್ಯೆಯೇ ಎನ್‌ಸಿಪಿ ಶಾಸಕ ಬೆಳಗಾವಿ ಭೇಟಿ ನೀಡಿರುವುದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ..
ಕೊಲ್ಲಾಪುರ- ಕುಗನೊಳ್ಳಿ ಮಾರ್ಗವಾಗಿ ನಿನ್ನೆ ರಾತ್ರಿಯೇ ರೋಹಿತ್ ಪವಾರ್ ಬೆಳಗಾವಿಗೆ ಆಗಮಿಸಿದ್ದರು..
ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ..
ನಿನ್ನೆ ದೀಪಕ ದಳವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು..
ಇಂದು ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ರೋಹಿತ್ ಪವಾರ್ ಭೇಟಿ ನೀಡಿದ್ದಾರೆ..
ಹಿಂಡಲಗಾ ಗ್ರಾಮದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ರೋಹಿತ್ ಪವಾರ್ ಭೇಟಿ ನೀಡಿದ್ದರು..
ಬಳಿಕ ಶಿವಾಜಿ ಪುತ್ಥಳಿಗೆ ರೋಹಿತ್ ಪವಾರ್ ಮಾಲಾರ್ಪಣೆ ಸಲ್ಲಿಸಿದರು..
ನಂತರ ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್ ಗೆ ರೋಹಿತ್ ಪವಾರ್ ಭೇಟಿ ನೀಡಿದ್ದರು.. ಇದೀಗ ಮಹಾರಾಷ್ಟ್ರಕ್ಕೆ ಮರಳಿದ್ದಾರೆ..








