India China Border Clash : ನಮ್ಮ ಸೈನಿಕರ ಧೈರ್ಯಕ್ಕೆ ಸಲಾಂ – ರಾಜನಾಥ್ ಸಿಂಗ್
ಡಿಸೆಂಬರ್ 9 ರಂದು ಬಾರತೀಯ ಯೋಧರನ್ನ ಚೀನೀಯರು ಕೆಣಕಿದ್ದು , ಇದಕ್ಕೆ ನಮ್ಮ ಭಾರತದ ಯೋಧರು ತಕ್ಕ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.. ಆದ್ರೆ ಘರ್ಷಣೆಯಲ್ಲಿ ಉಭಯ ರಾಷ್ಟ್ರಗಳ 30 ಕ್ಕೂ ಅಧಿಕ ಸೈನಿಕರಿಗೆ ಗಾಯವಾಗಿದೆ..
ಘರ್ಷಣೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ್ದಾರೆ.. ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ. ನಮ್ಮ ಸೈನಿಕರ ಧೈರ್ಯಕ್ಕೆ ಸಲಾಂ ಎಂದಿದ್ದಾರೆ.
ಅಲ್ಲದೇ ಸಂಘರ್ಷದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಿಗೂ ತೀವ್ರ ಗಾಯಗಳೂ ಆಗಿಲ್ಲ. ಚೀನಾ ಸೈನಿಕರು ವಾಪಸ್ ತಮ್ಮ ನೆಲೆಗೆ ತೆರಳಿದ್ದಾರೆ. ಶಾಂತಿ ಕಾಪಾಡಲು ಚೀನಾ ಸೇನಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಭಾರತ ಎಲ್ಲ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಭಾರತ ಶೌರ್ಯ ಕ್ಷಮತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಜನಾಥ್ ಸಿಂಗ್ ಅವರು ಹೇಳಿದ್ದಾರೆ.








