Siddaramaih : ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ ವಿಚಾರಕ್ಕೆ ಮಾಜಿ ಸಿಎಂ ( ವಿಧಾನಸಭೆ ವಿಪಕ್ಷ ನಾಯಕರು ) ಪ್ರತಿಕ್ರಿಯಿಸಿದ್ದಾರೆ..
ಸಾವರ್ಕರ್ ಬಗ್ಗೆ ನಾನೇನು ಮಾತನಾಡಿಲ್ಲ. ಮಾತನಾಡೋದಕ್ಕೂ ಹೋಗಲ್ಲ. ನ್ಯಾಷನಲ್ ಲೀಡರ್ಸ್ ವಲ್ಲಭಭಾಯಿ ಫೋಟೊ ಹಾಕಿದ್ದಾರೆ.
ಅಂದ್ಮೇಲೆ ನೆಹರೂ ಫೋಟೊ ಹಾಕಬೇಕೋ, ಬೇಡವೋ , ಮಹಾತ್ಮಾ ಗಾಂಧೀಜಿ ಅವರದ್ದು ಹಾಕಿದ್ದಾರೆ. ಅಂಬೇಡ್ಕರ್ ಅವರದ್ದು ಹಾಕಿದ್ದಾರೆ, ಜಗಜೀವನ್ ರಾಮ್ ಫೋಟೊ ಹಾಕ್ಬೇಕೋ, ಬೇಡ್ವೋ , ಬಸವಣ್ಣ, ವಾಲ್ಮೀಕಿ, ಕನಕದಾಸರು, ನಾರಾಯಣಗುರು, ಶಿಶುನಾಳ ಶರೀಫರೂ ಇದ್ದಾರೆ. ಕುವೆಂಪು ಇದ್ದಾರೆ ಎಲ್ಲ ದಾರ್ಶನಿಕರದ್ದೂ ಹಾಕಬೇಕಿತ್ತಲ್ವಾ , ದಾರ್ಶನಿಕರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಲ್ವಾ , ಅಷ್ಟೇ ನಮ್ಮ ಡಿಮ್ಯಾಂಡ್ ಎಂದು ಹೇಳಿದ್ದಾರೆ.
ಅಭ್ಯರ್ಥಿ ಘೋಷಣೆ ಮಾಡೋರ ವಿರುದ್ಧ ಶಿಸ್ತು ಕ್ರಮ ಕೈಗೊಳ್ತೀವಿ ಎಂಬ ಜಿ.ಪರಮೇಶ್ವರ ಹೇಳಿಕೆ ವಿಚಾರಕ್ಕೆ, ಅಭ್ಯರ್ಥಿಯನ್ನ ಘೋಷಣೆ ಮಾಡಲು ಪಕ್ಷದಲ್ಲಿ ಒಂದು ಪ್ರಕ್ರಿಯೆ ಇದೆ. ಅದರ ಪ್ರಕಾರವೇ ಮಾಡಬೇಕು. ನಾನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.








