Ranji Trophy: ಭರ್ಜರಿ ದ್ವಿ ಶತಕ ಗಳಿಸಿದ ಅಜಿಂಕ್ಯ ರಹಾನೆ…
ಭಾರತ ಅನುಭವಿ ಆಟಗಾರ ಅಜಿಂಕ್ಯ ರಹಾನೆ IPL ಹರಾಜಿಗೂ ಎರಡು ದಿನಗಳ ಮೊದಲೇ ರಣಜಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೈದ್ರಾಬಾದ್ ವಿರುದ್ಧ ಆಡುತ್ತಿರು ಅಜಿಂಕ್ಯ ರಹಾನೆ ಮುಂಬೈ ಪರ ಭರ್ಜರಿ ದ್ವಿ ಶತಕ ಗಳಿಸಿದ್ದಾರೆ.
ರಹಾನೆ ಅಷ್ಟೆ ಅಲ್ಲದೇ ಸರ್ಫರಾಜ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಸಹ ಶತಕಗಳನ್ನ ದಾಖಲಿಸಿದ್ದಾರೆ. ಸೂರ್ಯಕುಮಾರ್ 80 ಎಸೆತಗಳಲ್ಲಿ 90 ರನ್ ಗಳಿಸಿ ಔಟ್ ಆಗಿದ್ದಾರೆ.
ಅಜಿಂಕ್ಯ ರಹಾನೆ 261 ಎಸತಗಳಲ್ಲಿ 204 ರನ್ ಗಳಿಸಿದ್ದಾರೆ. ಇದರಲ್ಲಿ 26 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದ್ದಾರೆ. ಅಜಿಂಕ್ಯ ರಹಾನೆ ಕೊನೆಯ ಭಾರಿ ಈ ವರ್ಷದ ಜನವರಿಯಲ್ಲಿ ಇಂಡಿಯನ್ ಜೆರ್ಸಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಆನಂತರ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ .
Ranji Trophy: Ajinkya Rahane scored a massive double century…








