Ranaji Cricket : ಕರ್ನಾಟಕಕ್ಕೆ ಇನ್ನಿಂಗ್ಸ್ ನಲ್ಲಿ ಮುನ್ನಡೆ
ಆರ್.ಸಮರ್ಥ್ ಅವರ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ಕ್ರಿಕೆಟ್ ತಂಡ ಸರ್ವಿಸ್ ತಂಡದ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಸಿದೆ. ಸಮರ್ಥ್ ಟೂರ್ನಿಯಲ್ಲಿ ಸತತ ಎರಡನೆ ಶತಕ ಸಿಡಿಸಿದ್ದಾರೆ.
ಎರಡನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 93.2 ಓವರ್ಗಳಲ್ಲಿ 304 ರನ್ಗಳಿಗೆ ಆಲೌಟ್ ಆಯಿತು. ಬೌಂಡರಿಗಳ ಸುರಿಮಳೆಗೈದ ಆರ್.ಸಮರ್ಥ್ ಆಕರ್ಷಕ ಶತಕ ಸಿಡಿಸಿದರು. ಸಮರ್ಥ್ 17 ಬೌಂಡರಿ ಸೇರಿ 137 ರನ್ ಗಳಿಸಿದರು. ನಿಕಿನ್ ಜೋಸ್ 30, ಮನೀಶ್ ಪಾಂಡೆ 45, ಶ್ರೇಯಸ್ ಗೋಪಾಲ್ 12, ಕೆ.ಗೌತಮ್ 10 ರನ್ ಗಳಿಸಿದರು.
ಪುದುಚೇರಿ ಪರ ಅಂಕೀತ್ ಶರ್ಮ 60ಕ್ಕೆ 6, ಮಾರಿಮುತ್ತು ವಿಕ್ನೆಶ್ವರನ್ 32ಕ್ಕೆ 2 ವಿಕೆಟ್ ಪಡೆದರು. ಮಯಾಂಕ್ ಪಡೆ 134 ರನ್ಗಳ ಮುನ್ನಡೆ ಪಡೆಯಿತು.
ಎರಡನೆ ಇನ್ನಿಂಗ್ಸ್ ಆರಂಭಿಸಿದ ಪುದುಚೇರಿ ತಂಡ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನೆಯನ್ ಶ್ಯಾಮ್ 24, ಕೋತಂಡಪಾಣಿ ಅರವಿಂದ್ 1, ಜಯ್ ಪಾಂಡೆ ಅಜೇಯ 25, ಪಾರಾಸ್ ಡೋಗ್ರಾ 3, ಶ್ರೀಧರ್ ಅಶ್ವತ್ ಅಜೇಯ 3 ರನ್ ಗಳಿಸಿದರು. ಸರ್ವಿಸ್ ತಂಡ 58ಕ್ಕೆ 3 ವಿಕೆಟ್ ಕಳೆದುಕೊಂಡಿದೆ. ವೇಗಿಗಳಾದ ರೋನಿತ್ ಮೋರೆ, ವೈಶಾಕ್ ಮತ್ತು ಸ್ಪಿನ್ನರ್ ಕೆ. ಗೌತಮ್ ತಲಾ 1 ವಿಕೆಟ್ ಪಡೆದಿದ್ದಾರೆ.








