Hubballi : ಬೈಕ್ ಮತ್ತು ಜೆಸಿಬಿ ನಡುವೆ ಅಪಘಾತ – ಸುಟ್ಟು ಕರಕಲಾದ ಬೈಕ್…
ಬೈಕ್ ಹಾಗೂ ಜೆಸಿಬಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಇನ್ನುಳಿದ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.
ಅಂಚಟಗೇರಿ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬೈಕ್ ನಲ್ಲಿ ಮೂವರು ಯುವಕರು ವೇಗವಾಗಿ ಬರುತ್ತಿದ್ದಾಗ ರಸ್ತೆ ಮಧ್ಯೆ ಜೆಸಿಬಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಜೆಸಿಬಿಗೆ ಢಿಕ್ಕಿ ಹೊಡಿದಿದೆ.
ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಬೈಕ್ ಸ್ಥಳದಲ್ಲೇ ಬೆಂಕಿಗಾಹುತಿಗಾಗಿದೆ. ಇನ್ನುಳಿದ ಇಬ್ಬರು ಸವಾರರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
Hubballi : Accident between bike and JCB – bike burnt to ashes…








