IND vs BAN 2nd TEST : ಮೊದಲ ಇನ್ನಿಂಗ್ಸ್ ನಲ್ಲಿ 227 ರನ್ ಗಳಿಗೆ ಬಾಂಗ್ಲಾ ಆಲೌಟ್…
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ 227 ರನ್ ಗಳಿಗೆ ಅಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ಭಾರತ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಮೊದಲ ದಿನದ ಸ್ಟಂಪ್ಗಳ ನಂತರ, ನಾಯಕ ಕೆಎಲ್ ರಾಹುಲ್ 3 ಮತ್ತು ಶುಭಮನ್ ಗಿಲ್ 14 ರನ್ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಮೀರ್ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ಪರ ಮೊಮಿನುಲ್ ಹಕ್ ಗರಿಷ್ಠ 84 ರನ್ ಗಳಿಸಿದ್ದನ್ನ ಬಿಟ್ಟರೆ ಬೇರಾವಾ ಆಟಗಾರರೂ ದೊಡ್ಡ ಇನ್ನಿಂಗ್ಸ್ ಆಡಲು ಮುಂದಾಗಲಿಲ್ಲ. ಮುಶ್ಫಿಕರ್ ರಹೀಮ್ 26 ಮತ್ತು ಲಿಟನ್ ದಾಸ್ 25 ರನ್ ಗಳಿಸಿದರು. ಆರಂಭಿಕರಾದ ನಜ್ಮುಲ್ ಹಸನ್ ಶಾಂಟೊ 24 ರನ್ ಕೊಡುಗೆ ನೀಡಲಷ್ಟೆ ಶಕ್ತರಾದರು.
ಭಾರತದ ಪರ ಅನುಭವಿ ವೇಗಿಗಳಾದ ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಇನ್ನೂ 12 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ ಜಯದೇವ್ ಉನದ್ಕತ್ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
IND vs BAN 2nd TEST: Bangla all out for 227 runs in the first innings…








