CAT Exam : ಫಲಿತಾಂಶ ಬಿಡುಗಡೆ – ಪುರುಷರೇ ಮೇಲುಗೈ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 2022ನೇ ಸಾಲಿನ ಸಾಮಾನ್ಯ ದಾಖಲಾತಿ ಪರೀಕ್ಷೆಯ ( CAT) ಫಲಿತಾಂಶ ಹೊರಬಂದಿದೆ.. ಈ ಬಾರಿ ಪುರುಷ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ..
ದೆಹಲಿ, ಮಹಾರಾಷ್ಟ್ರ, ತೆಲಂಗಾಣದ ತಲಾ ಇಬ್ಬರು, ಗುಜರಾತ್, ಹರಿಯಾಣ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದಂತೆ 11 ಅಭ್ಯರ್ಥಿಗಳು ಶೇ 100ರಷ್ಟು ಅಂಕ ಗಳಿಸಿದ್ದಾರೆ.
ಶೇ 100ರಷ್ಟು ಅಂಕ ಗಳಿಸಿದ ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.. ಕರ್ನಾಟಕದ ಇಬ್ಬರು ಸೇರಿದಂತೆ 22 ಅಭ್ಯರ್ಥಿಗಳು ಶೇ 99.99 ಅಂಕ ಗಳಿಸಿದ್ದಾರೆ.
ಅವರಲ್ಲಿ 21 ಅಭ್ಯರ್ಥಿಗಳು ಪುರುಷರು, ಒಬ್ಬರು ಮಹಿಳೆಯಾಗಿದ್ಧಾರೆ. ಶೇ 99.98 ಅಂಕಗಳನ್ನು 22 ಅಭ್ಯರ್ಥಿಗಳು ಗಳಿಸಿದ್ದು, ಅವರಲ್ಲಿ 19 ಪುರುಷರು ಇದ್ದಾರೆ.
ದೇಶದ 154 ನಗರಗಳ 293 ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 27ರಂದು ಪರೀಕ್ಷೆ ನಡೆಸಲಾಗಿತ್ತು. 2.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇ 35 ಮಹಿಳೆಯರು, ಶೇ 65ರಷ್ಟು ಪುರುಷರು ಇದ್ದರು.
CAT Exam : results announce , saakshatv








