ಹಾಸನ: ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಿದರೆ ಎದುರಿಸುವ ಶಕ್ತಿ ನಮಗಿದೆ. ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನನ್ನದಲ್ಲ. ನಾನೇನು ಸುಮ್ಮನೆ ಕುಳಿತಿದ್ದೀನಾ..? ಯಡಿಯೂರಪ್ಪ ಏನು ಶಾಶ್ವತವಾಗಿ ಅಧಿಕಾರದಲ್ಲಿ ಇರ್ತಾನಾ.. ? ನಾನು ಬದುಕಿದ್ದಾಗಲೇ ಹಾಸನಕ್ಕೆ ತೋಟಗಾರಿಕೆ ಕಾಲೇಜು ತಂದೇ ತರ್ತೆನೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಸಿಎಂ ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಯಡಿಯೂರಪ್ಪ ರದ್ದು ಮಾಡಿದರೆ ಏನಾಯಿತು, ನನಗೆ ಹೇಗೆ ತರಬೇಕು ಎಂದು ನನಗೆ ಗೊತ್ತು ಕಣಯ್ಯಾ, ನಾನೇನು ಸುಮ್ಮನೆ ಕುಳಿತಿಲ್ಲ. ಈ ದೇವೇಗೌಡರ ಕುಟುಂಬದ ಬಗ್ಗೆ ಗೊತ್ತಿಲ್ಲವೇ. ಕಾಲೇಜು ರದ್ದು ಮಾಡಿದರೆ ನಾನೇನು ಹೆದರಿಕೊಂಡು ಓಡಿ ಹೋಗುತ್ತೇನಾ..? ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಬಜೆಟ್ ಬಗ್ಗೆ ಹಾಸನ ಬಜೆಟ್, ಮಂಡ್ಯ ಬಜೆಟ್ ಅಂತ ವ್ಯಂಗ್ಯ ಮಾಡ್ತಿದ್ದವರು ಈಗ ಎಲ್ಲಿದ್ದಾರೆ. ಇದು ಯಡಿಯೂರಪ್ಪ ಅವರಿಗೆ ಒಳ್ಳೆಯದಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದ ಬಿಎಸ್‍ವೈ ಈಗ ಮಾಡುತ್ತಿರುವುದೇನು ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಮೋದಿ ಕಣ್ಮುಚ್ಚಿ ಕುಳಿತ್ತಿದ್ದಾರಾ..ರೇವಣ್ಣ
ರಾಜ್ಯ ಬಿಜೆಪಿ ಸರ್ಕಾರ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡುವ ಭೂಸುಧಾರಣಾ ಕಾಯ್ದೆ ಜಾರಿಗೆ ಮುಂದಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ನೀತಿ ಇದಾಗಿದೆ. ಸರ್ಕಾರ ಭೂಮಾಫಿಯಾ ಜೊತೆ ಕೈಜೋಡಿ ಈ ಕಾಯ್ದೆ ತಂದಿದೆ. ಇದೆಲ್ಲದರ ಬಗ್ಗೆ ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಕಣ್ಮುಚ್ಚಿ ಕುಳಿತಿದ್ದು, ಈಗ ಬರೀ ಪಾಕಿಸ್ತಾನ-ಲಡಾಕ್ ನೋಡುತ್ತಿದ್ದಾರೆ ಎಂದು ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಕಾಜ್‍ಡೌನ್ ವೇಳೆ ಹೂವಿನ ಬೆಲೆ ನಷ್ಟ ಸೇರಿ ಇತರೆ ಪರಿಹಾರದ ಹಣ ಸರ್ಕಾರದಿಂದ ರೈತರಿಗೆ ಇನ್ನೂ ಬಂದಿಲ್ಲ. ಹಾಸನ ತಾಲೂಕಿಗೆ ಮಂಜೂರಾಗಿದ್ದ ಕೃಷಿ ಕಾಲೇನನ್ನು ಸರ್ಕಾರ ರದ್ದುಪಡಿಸಿದೆ ಎಂದು ರೇವಣ್ಣ ಅಸಮಾಧಾನ ವ್ತಕ್ತಪಡಿಸಿದರು.








