Blaupunkt : ಸೌಂಡ್‌ಬಾರ್ ಆಕಾರದ ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್‌ಗಳು ಭಾರತದಲ್ಲಿ ಬಿಡುಗಡೆ…
ಜರ್ಮನ್ ಆಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಕಂಪನಿ ಬ್ಲಾಪಂಕ್ಟ್ ಶುಕ್ರವಾರ ಹೊಸದಾಗಿ SBA15 ಮತ್ತು SBA15GM ಎಂಬ ಸೌಂಡ್‌ಬಾರ್ – ಆಕಾರದ ವೈರ್‌ಲೆಸ್ ಸ್ಪೀಕರ್‌ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. SBA15 ಮತ್ತು SBA15GM ಸೌಂಡ್‌ಬಾರ್‌ಗಳ ಬೆಲೆ ಕ್ರಮವಾಗಿ 1,099 ಮತ್ತು 1,399 ರೂ ನಿಗಧಿಪಡಿಸಲಾಗಿದೆ. ಈ ಸೌಂಡ್‌ಬಾರ್‌ಗಳು ಭಾರತದಲ್ಲಿ Blaupunkt ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಿವೆ.
Blaupunkt SBA15 ಮತ್ತು SBA15GM ಫೀಚರ್ಸ್ :
Blaupunkt SBA15 – 15W ರೇಟೆಡ್ ಡ್ಯುಯಲ್ 2-ಇಂಚಿನ ಸ್ಪೀಕರ್‌ಗಳನ್ನ ಹೊಂದಿದೆ. SBA15GM 2.5-ಇಂಚಿನ 14W ರೇಟ್ ಮಾಡಿದ ಧ್ವನಿ ಉತ್ಪಾದನೆಯ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಎರಡೂ ಸೌಂಡ್‌ಬಾರ್‌ಗಳು ಸ್ಲಿಮ್ ಮತ್ತು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿವೆ. ಗೇಮರ್‌ಗಳನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿದೆ. ಅವುಗಳನ್ನು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಪಿಸಿ ಮತ್ತು ಟಿವಿಯೊಂದಿಗೆ ಜೋಡಿಸಬಹುದು. SBA15GM ಅದರ ವಿನ್ಯಾಸದಲ್ಲಿ LED ಲೈಟ್ ಅಳವಡಿಸಲಾಗಿದೆ.
SBA15 ಮತ್ತು SBA15GM ಸೌಂಡ್‌ಬಾರ್‌ಗಳು 2,000 mAh ಬ್ಯಾಟರಿಯಿಂದ ಚಾಲಿತವಾಗಿದ್ದು, Blaupunkt ನ ಟರ್ಬೋವೋಲ್ಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. ಕನೆಕ್ಟಿವಿಟಿಗಾಗಿ ಈ ಎರಡು ಸ್ಪೀಕರ್‌ಗಳು ಮೈಕ್ರೊ ಎಸ್‌ಡಿ ಸ್ಲಾಟ್, ಆಕ್ಸಿಲರಿ ಪೋರ್ಟ್, ಯುಎಸ್‌ಬಿ ಪೋರ್ಟ್, ಬ್ಲೂಟೂತ್, ಎಫ್‌ಎಂ ಮತ್ತು ರಿಯಲ್ ವೈರ್‌ಲೆಸ್ ಸ್ಟಿರಿಯೊ ನೀಡಲಾಗಿದೆ. (ಟಿಡಬ್ಲ್ಯೂಎಸ್) ಸೌಂಡ್‌ಬಾರ್‌ಗಳ TWS ಉತ್ಪನ್ನಗಳಾಗಿರುವುದರಿಂದ, ಎರಡು ಬಾರ್‌ಗಳನ್ನ ಸಂಪರ್ಕಿಸುವ ಮೂಲಕ ಆಡಿಯೋ ಔಟ್ ಪುಟ್ ದ್ವಿಗುಣಗೊಳಿಸಬಹುದು.
Blaupunkt launches soundbar-shaped portable wireless speakers in India…








